Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಬಲಪಂಥೀಯ ಟ್ರಾಲ್‌ಗಳಿಗೆ ಮುಲ್ಕ್ ಸಿನೆಮಾ...

ಬಲಪಂಥೀಯ ಟ್ರಾಲ್‌ಗಳಿಗೆ ಮುಲ್ಕ್ ಸಿನೆಮಾ ನಿರ್ದೇಶಕ: ಅನುಭವ್ ಸಿನ್ಹಾರ ಬಹಿರಂಗ ಪತ್ರ

ವಾರ್ತಾಭಾರತಿವಾರ್ತಾಭಾರತಿ19 July 2018 12:11 AM IST
share
ಬಲಪಂಥೀಯ ಟ್ರಾಲ್‌ಗಳಿಗೆ ಮುಲ್ಕ್ ಸಿನೆಮಾ ನಿರ್ದೇಶಕ: ಅನುಭವ್ ಸಿನ್ಹಾರ ಬಹಿರಂಗ ಪತ್ರ

ಪ್ರೀತಿಯ ಟ್ರಾಲ್‌ಗಳೇ, ನಮ್ಮ ದೇಶ ಹೆಚ್ಚು ಮತ್ತು ಉತ್ತಮ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಬೇಕಿತ್ತೆಂದು ನನಗನಿಸುತ್ತದೆ. ಸರಕಾರ ಉತ್ತಮ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿದ್ದರೆ ಚೆನ್ನಾಗಿರುತ್ತಿತ್ತು. ನೀವು ಒಂದು ದೊಡ್ಡ ಭಾರತೀಯ ಕಂಪೆನಿಯ ಸಿಇಒ ಅಥವಾ ದೊಡ್ಡ ಲೇಖಕ ಅಥವಾ ಸಂಗೀತಗಾರ ಅಥವಾ ನೀವು ಏನಾಗಬೇಕೆಂದು ಬಯಸಿದ್ದೀರೊ ಅದ್ಯಾವುದಾದರೂ ಆಗಬೇಕಿತ್ತು ಎಂದು ನಾನು ಆಶಿಸುತ್ತೇನೆ. ನೀವು ನಿಜವಾಗಿಯೂ ನಮ್ಮ ದೇಶವನ್ನು ಪ್ರೀತಿಸುತ್ತಿರಬೇಕಿತ್ತು ಮತ್ತು ಸೇವೆ ಮಾಡುತ್ತಿರಬೇಕಿತ್ತು ಎಂದು ನಾನು ಆಶಿಸುತ್ತೇನೆ. ನಿಮ್ಮ ಕನಸು ಏನೆಂಬುದು ನಿಮಗೆ ನೆನಪಾದರೂ ಇದೆಯೇ? ಅಥವಾ ಅದು ಕೂಡಾ ಕಳೆದ ನಾಲ್ಕು ವರ್ಷಗಳಿಂದ ಪ್ರತಿ ದಿನ, ಪ್ರತಿ ಗಂಟೆ ನೀವು ಬರೆಯುವ ದ್ವೇಷ ಬರಹಗಳ ರಾಶಿಯ ಅಡಿಯಲ್ಲಿ ಕಳೆದು ಹೋಗಿದೆಯೇ? ನಿಮಗೊಂದು ಹೆಸರಿಲ್ಲ, ಮುಖವಿಲ್ಲ. ನೀವು ಏನು ಮಾಡುತ್ತಿದ್ದೀರೆಂದು ನಿಮ್ಮ ಮನೆಯವರು ಇತರರಿಗೆ ಹೇಳುವ ಹಾಗಿಲ್ಲ. ನಿಮ್ಮ ಹೆತ್ತವರು ನಿಮ್ಮ ಬಗ್ಗೆ ಹೆಮ್ಮೆ ಹೊಂದಿಲ್ಲ, ನಿಮ್ಮ ಸಹೋದರಿ, ನಿಮ್ಮ ಸಹೋದರರಿಗೂ ಕೂಡಾ. ಅದಕ್ಕಿಂತಲೂ ಕೆಟ್ಟದ್ದೆಂದರೆ ನಿಮಗೆ ಒಂದು ಭವಿಷ್ಯ ಎಂಬುದೇ ಇಲ್ಲ. ನಿಮ್ಮನ್ನು ಒಂದು ದಿನ ಹೊರಗೆಸೆಯಲಾಗುವುದು. ಅದಕ್ಕಾಗಿ ನಿಮಗೆ ಸಿಗುವುದಾದರೂ ಏನು? 3,000 ರೂ.??? 5,000 ರೂ.? ನಾನು ನಿಮಗೆ ಇನ್ನೊಂದು ವಿಷಯ ಹೇಳಲೇ..

ನೀವು ಟ್ರಾಲ್ ಮಾಡುವ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಗಳಿಸಿಕೊಂಡಿದ್ದಾರೆ. ಅವರಿಗೊಂದು ಜೀವನ ಎಂಬುದಿದೆ. ಮತ್ತೊಂದು ವಿಷಯ ನಿಮಗೆ ತಿಳಿದಿದೆಯೇ? ಅವರಿಗೊಂದು ಧ್ವನಿಯಿದೆ ಮತ್ತು ಆ ಧ್ವನಿ ನಿಮ್ಮ ನಾಯಕರಿಗೆ ಅಪಥ್ಯವಾಗಿದೆ. ನೀವು ಕಂಬಕ್ಕೆ ಕಟ್ಟಿದ ಒಂದು ಧ್ವನಿವರ್ಧಕದಂತೆ. ಮಳೆಯಾಗಲೀ, ಬಿಸಿಲಾಗಲೀ ಅದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಏನೂ ಇಲ್ಲ!!! ಅವರ ಪರವಾಗಿ ನೀವು ದ್ವೇಷ ಕಾರುತ್ತಲೇ ಇರುತ್ತೀರಿ. ವೈಯಕ್ತಿಕವಾಗಿ ನನಗೆ ನಿಮ್ಮ ಮೇಲೆ ದಯೆ ಮೂಡುತ್ತದೆ. ನೀವು ಟ್ರಾಲ್ ಮಾಡುವ ಜನರಿಗೆ ಒಂದು ಭವಿಷ್ಯವಿದೆ, ಜೀವನವಿದೆ. ಅವರು ತಮಗೆ ಸಮಯ ಸಿಕ್ಕಾಗ ಇಲ್ಲಿಗೆ ಬರುತ್ತಾರೆ ಮತ್ತು ನಂತರ ತಮ್ಮ ಜೀವನಕ್ಕೆ ಮರಳುತ್ತಾರೆ. ಆದರೆ ನೀವು ನಿಮ್ಮ ನಾಯಕರು ಸೂಚಿಸಿದಂತೆ ಮುಂದಿನ ವ್ಯಕ್ತಿಯನ್ನು ಗುರಿ ಮಾಡುತ್ತೀರಿ, ಇಲ್ಲೇ ಇರುತ್ತೀರಿ. ಇದನ್ನು ನೀವು ಪ್ರತಿದಿನ ಮಾಡುತ್ತಿರುತ್ತೀರಿ. ನನ್ನ ಗೆಳೆಯರೇ, ನೀವು ಮಾಡುವ ಈ ಕೆಲಸ ಜಗತ್ತಿನ ಯಾವುದೇ ಭಾಗದಲ್ಲೂ ಒಂದು ವೃತ್ತಿಯಾಗಿಲ್ಲ. ಮುಲ್ಕ್ ಸಿನೆಮಾಕ್ಕೆ ದಾವೂದ್ ಇಬ್ರಾಹೀಂ ಹೂಡಿಲ್ಲ. ಬೇಕಾದರೆ ಆತನನ್ನೇ ನೀವು ಕೇಳಿ. ಇನ್ನು ಕಾಂಗ್ರೆಸ್ ಕೂಡಾ ಇಲ್ಲ, ರಾಹುಲ್ ಗಾಂಧಿಯನ್ನು ಬೇಕಾದರೆ ಕೇಳಿ. ಅದನ್ನು ನಿರ್ಮಾಣ ಮಾಡಿರುವುದು ಆರೆಸ್ಸೆಸ್ ಕೂಡಾ ಅಲ್ಲ, ನೀವು ಮೋಹನ್ ಭಾಗವತ್ ಅವರಲ್ಲಿ ವಿಚಾರಿಸಬಹುದು.

ಈ ಸಿನೆಮಾವನ್ನು ನಿರ್ಮಿಸಿರುವವರು ದೀಪಕ್ ಮುಕುಟ್ ಮತ್ತು ಅವರ ತಂದೆ, ಹಿರಿಯ ಉದ್ಯಮಿ ಕಮಲ್ ಮುಕುಟ್. ನನ್ನ ಪ್ರತಿಯೊಂದು ಪೋಸ್ಟ್ ಕೂಡಾ ಮುಲ್ಕ್‌ಗೆ ಸಂಬಂಧಿಸಿದ್ದಲ್ಲ. ನಾವು ಈ ಸಿನೆಮಾದ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದೇವೆ ಮತ್ತು ಅದಕ್ಕಿಂತಲೂ ಹೆಚ್ಚು ಹಣವನ್ನು ಚಿತ್ರದ ನಿರ್ಮಾಣಕ್ಕೆ ವೆಚ್ಚ ಮಾಡಿದ್ದೇವೆ. ಈ ಟ್ವೀಟ್‌ಗಳು ನಮ್ಮ ಪ್ರಚಾರ ಅಭಿಯಾನದ ಅತ್ಯಂತ ಸಣ್ಣ ಭಾಗವಷ್ಟೇ ಮತ್ತು ನಾನು ಈ ಮೊದಲು ತಿಳಿಸಿದಂತೆ ನಮಗೂ ಒಂದು ಜೀವನವಿದೆ......ಮತ್ತು ಒಂದು ಧ್ವನಿಯಿದೆ, ಹಾಗಾಗಿ ಕೆಲಸದ ಹೊರಗೆಯೂ ನಾವು ಮಾತನಾಡುತ್ತೇವೆ. ನಾವು ನಿಮ್ಮ ಪೋಸ್ಟ್‌ಗಳನ್ನು ಓದುತ್ತೇವೆ ಮತ್ತು ನಗುತ್ತೇವೆ. ನಿಮ್ಮ ಬಗ್ಗೆ ನಮಗೆ ದುಃಖವಾಗುತ್ತದೆ. ಕೆಲವೊಂದು ಬಾರಿ ನೀವು ನಮಗೆ ನೋವುಂಟು ಮಾಡುತ್ತೀರಿ. ಆದರೆ ಅದು ನಿಮ್ಮ ಧ್ವನಿ ಅಲ್ಲ ಎಂದು ನಮಗೆ ತಿಳಿದಿರುವ ಕಾರಣ ಹೆಚ್ಚಾಗಿ ನಮಗೆ ದುಃಖವಾಗುವುದಿಲ್ಲ. ಇನ್ನೂ ನಿಖರವಾಗಿ ಹೇಳುವುದಾದರೆ ಹಾಗೆ ಮಾಡುತ್ತಿರುವವರು ನೀವಲ್ಲ. ನಿಮ್ಮ ಬೆರಳುಗಳು ಮತ್ತು ಕಣ್ಣುಗಳನ್ನು ನಿಮ್ಮ ನಾಯಕರು ಅವರಿಗೆ ಬೇಕಾದಂತೆ ಬಳಸುತ್ತಿದ್ದಾರೆ. ಅದು ನಿಮ್ಮ ನಾಯಕರು ನೀಡುವ ಸೂಚನೆಗಳು ಮತ್ತು ಅವರಿಗೆ ನಾವು ಹೆದರುವುದಿಲ್ಲ.

ಇದೇ ವೇಳೆ, ಈ ಪತ್ರಕ್ಕೆ ಪ್ರತಿಕ್ರಿಯೆ ನೀಡುವಂತೆ ನಿಮಗೆ ಸೂಚನೆಗಳು ಬರಬಹುದು. ಹಾಗಾಗಿ ನಾನಿಲ್ಲಿ ನನ್ನ ಸಿನೆಮಾದ ಬಗ್ಗೆ ಒಂದಷ್ಟು ಮಾತನಾಡುತ್ತೇನೆ. ಮುಲ್ಕ್ ಒಂದು ಉತ್ತಮ ಸಿನೆಮಾ. ಅದರಲ್ಲಿ ಏನನ್ನು ತೋರಿಸಲಾಗಿದೆ ಎಂದು ನೀವು ಯೋಚಿಸುತ್ತೀರೋ ಅದ್ಯಾವುದೂ ಅದರಲ್ಲಿ ಇಲ್ಲ. ಅದು ನಿಮ್ಮ ನಾಯಕರ ಕುರಿತಾಗಿ ಅಲ್ಲ. ಹಿಂದೂಗಳ ಅಥವಾ ಮುಸ್ಲಿಮರ ಕುರಿತಾಗಿ ಅಲ್ಲ. ಅದು ನಿಮ್ಮ ಕುರಿತಾದದ್ದು, ನನ್ನ ಕುರಿತಾದದ್ದು ಮತ್ತು ಮುಖ್ಯವಾಗಿ ನಮ್ಮ ಕುರಿತಾದದ್ದು. ನಿಮ್ಮ ಕೆಟ್ಟ ಅನಿಸಿಕೆಗಳನ್ನು ಖಂಡಿತವಾಗಿಯೂ ಬರೆಯಿರಿ ಆದರೆ ಸಿನೆಮಾ ಮಾತ್ರ ವೀಕ್ಷಿಸಿ. ಅದನ್ನು ನೀವು ಇಷ್ಟಪಡುತ್ತೀರಿ, ಯಾಕೆಂದರೆ ನಿಮ್ಮಿಳಗೆ ಈಗಲೂ ಸ್ವಲ್ಪ ನೀವಿದ್ದೀರಿ ಎಂದು ನನಗೆ ತಿಳಿದಿದೆ. ನಿಮಗೊಂದು ಉತ್ತಮ ಭವಿಷ್ಯ ಮತ್ತು ಉತ್ತಮ ಜೀವನ ಸಿಗಲೆಂದು ನಾನು ಈಗಲೂ ಹಾರೈಸುತ್ತೇನೆ. ನಿಮ್ಮ ನಾಯಕರಿಗೆ ಅದೆಲ್ಲ ಈಗಲೇ ಇದೆ. ಶುಭಕಾಮನೆಗಳು, ಅನುಭವ್ ಸಿನ್ಹಾ
ಸೂಚನೆ: ನನ್ನ ಸಾಮಾಜಿಕ ಜಾಲತಾಣ ವಿಳಾಸ ನಿಮ್ಮ ಬಳಿಯಿದೆ ಎಂದು ನಾನು ತಿಳಿಯುತ್ತೇನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X