ಆರೋಗ್ಯ ವಿಜ್ಞಾನ ಸಪ್ತಾಹ ಸಮಾರೋಪ

ಮಂಗಳೂರು,ಜು.19: ಸಾವಯವ ಕೃಷಿಕ ಗ್ರಾಹಕ ಬಳಗ, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಪ್ರಣವ ಚಾರಿಟೇಬಲ್ ಟ್ರಸ್ಟ್‌ನ ಸಂಯುಕ್ತ ಆಶ್ರಯದಲ್ಲಿ ನಗರದ ಶರವು ದೇವಸ್ಥಾನದ ಬಳಿಯಿರುವ ಬಾಲಂಭಟ್ ಹಾಲ್‌ನಲ್ಲಿ ಆರೋಗ್ಯ ವಿಜ್ಞಾನ ಸಪ್ತಾಹ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಸಪ್ತಾಹದ ಸಮಾರೋಪ ಸಮಾರಂಭವನ್ನು ಯೋಗಾಚಾರ್ಯ ದೇವಬಾಬಾ ಉದ್ಘಾಟಿಸಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿ ತಜ್ಞ ಅಡ್ಡೂರು ಕೃಷ್ಣರಾವ್, ಪ್ರಣವ್ ಚಾರಿಟೇಬರ್ ಟ್ರಸ್ಟ್‌ನ ಅಧ್ಯಕ್ಷ ಪ್ರಸಾದ್, ಕಾರ್ಯಕ್ರಮದ ಸಂಚಾಲಕ ರತ್ನಾಕರ ಕುಳಾಯಿ ಉಪಸ್ಥಿತರಿದ್ದರು.
Next Story





