ಗುರುವಾಯನಕೆರೆ:ಕುವೆಟ್ಟು ಸರಕಾರಿ ಫ್ರೌಡಶಾಲೆಯಲ್ಲಿ ವನಮಹೊತ್ಸವ ಕಾರ್ಯಕ್ರಮ

ಮಂಗಳೂರು, ಜು.19: ಗುರುವಾಯನಕೆರೆ ಕುವೆಟ್ಟು ಸರಕಾರಿ ಫ್ರೌಡಶಾಲೆಯಲ್ಲಿ ನಡೆದ ವನಮಹೋತ್ಸವ ಮತ್ತು ವಾಚಾನಾಲಯಕ್ಕೆ ಉಚಿತ ಗ್ರಂಥಗಳ ಕೊಡುಗೆ ಕಾರ್ಯಕ್ರಮವನ್ನು ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಮುರಲಿ ಮೋಹನ್ ಚೂಂತಾರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಡಾ.ಚೂಂತಾರು, ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಅತ್ಯಂತ ಶಿಸ್ತುಬದ್ಧ ಕಲಿಕೆ, ಉತ್ತಮ ಪರಿಸರ ಮತ್ತು ಪರಿಣಾಮಕಾರಿ ಬೋಧನೆ ಇವೆಲ್ಲವನ್ನು ಸರಕಾರಿ ಶಾಲೆಯಲ್ಲಿ ಅಳವಡಿಸಿಕೊಂಡ ಶಿಕ್ಷಕರನ್ನು ಶ್ಲಾಘಿಸಿದರು. ಚೂಂತಾರು ಸರೋಜಿನಿ ಪ್ರತಿಷ್ಠಾನದಿಂದ ಶಾಲಾ ಗ್ರಂಥಾಲಯಕ್ಕೆ 200 ಪುಸ್ತಕಗಳನ್ನು ನೀಡಾಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಶಶಿಕಿರಣ್ ಜೈನ್, ಶಾಲಾ ಮುಖ್ಯಶಿಕ್ಷಕ ಜಗನ್ನಾಥ್, ಉದ್ಯಮಿ ಆಲ್ಫೋನ್ಸ್ ಪ್ರಾಂಕೋ, ಕುವೆಟ್ಟು ಗ್ರಾಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ತಾಪಂ ಸದಸ್ಯ ಗೋಪಿನಾಥ್ ನಾಯಕ್ , ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಬ್ದುಲ್ ಲತೀಫ್, ಜಿಪಂ ಸದಸ್ಯೆ ಮಮತಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಜಗನ್ನಾಥ್ ಸ್ವಾಗತಿಸಿದರು. ತೇಜಸ್ವಿ ಮತ್ತು ಭವಿಷ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಯೋಗಿಶ್ ವಂದಿಸಿದರು.







