ಯುಎಸ್ ವ್ಯಾಪಾರ ವ್ಯಾಜ್ಯವನ್ನು ಭಾರತ ಸೋಲುವ ಸಾಧ್ಯತೆ: ವಾಣಿಜ್ಯ ಕಾರ್ಯದರ್ಶಿ
ಕೊಲ್ಕತ್ತಾ, ಜು.19: ಅಮೆರಿಕವು ರಫ್ತು ಸಬ್ಸಿಡಿಯ ಕುರಿತು ವಿಶ್ವ ವ್ಯಾಪಾರ ಸಂಘದಲ್ಲಿ ಭಾರತದ ವಿರುದ್ಧ ದಾವೆಯಲ್ಲಿ ಭಾರತವು ಸೋಲುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರೀಟಾ ಟಿಯೊಶಿಯ ತಿಳಿಸಿದ್ದಾರೆ.
ಭಾರತದ ಆದಾಯ ಮಟ್ಟವು ರಫ್ತಿಗೆ ಸಬ್ಸಿಡಿ ನೀಡಲು ಅಗತ್ಯವಿರುವ ಮಟ್ಟವನ್ನು ಮೀರಿರುವ ಕಾರಣದಿಂದ ಭಾರತ ಸೋಲನುಭವಿಸಲಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಭಾರತವು ಯುಎಸ್‌ನ ಆರೋಪಗಳಿಗೆ ಪ್ರಬಲ ವಿರೋಧವನ್ನು ವ್ಯಕ್ತಪಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಫ್ತಿಗೆ ನೇರ ಸಬ್ಸಿಡಿಯನ್ನು ನೀಡಲು ಸಾಧ್ಯವಿಲ್ಲ. ಆದರೆ ಇತರ ದೇಶಗಳಲ್ಲಿ ಅಗತ್ಯವಿರುವ ನಿಯಂತ್ರಣ ನಿಯಮಗಳನ್ನು ಸರಕಾರ ಕಾನೂನಾತ್ಮಕವಾಗಿ ಬೆಂಬಲಿಸಬಹುದು ಎಂದು ರೀಟಾ ತಿಳಿಸಿದ್ದಾರೆ.
ಸರಕಾರವು ಈಗಾಗಲೇ ಈ ಪ್ರಕರಣದಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ. ಸದ್ಯ ಈ ದಾವೆಯು ಪರಿಹಾರವಾಗದಿರುವ ಕಾರಣ ರಫ್ತಿನ ಮೇಲಿನ ಸಬ್ಸಿಡಿ ಮುಂದುವರಿಯಲಿದೆ ಎಂದವರು ತಿಳಿಸಿದ್ದಾರೆ.
ರಫ್ತು ಸಬ್ಸಿಡಿಗಳು ಅಮೆರಿಕದ ಕಂಪೆನಿಗಳಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ಅಮೆರಿಕ ಈ ವರ್ಷದ ಮಾರ್ಚ್ ತಿಂಗಳಲಿ್ಲ ಭಾರತದ ವಿರುದ್ಧ ವಿಶ್ವ ವ್ಯಾಪಾರ ಸಂಘಟನೆಯ ವಿವಾದ ಪರಿಹಾರ ವಿಭಾಗದಲ್ಲಿ ದೂರು ದಾಖಲಿಸಿತ್ತು.





