ಶಾಲೆಗೆ ಬೀಗ ಹಾಕಿದ ಮಾಲಕ ವಿದ್ಯಾರ್ಥಿಗಳ ಶುಲ್ಕದೊಂದಿಗೆ ಪರಾರಿ!

ಮೊರಾದಾಬಾದ್ ಜು.20:ಇಲ್ಲಿಯ ಶಾಲೆಯೊಂದರ ಮಾಲಕ ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳು ಪಾವತಿಸಿದ್ದ ಶುಲ್ಕದೊಂದಿಗೆ ಪರಾರಿಯಾಗಿದ್ದಾನೆ. ಆತ ಒಟ್ಟು ಐದು ಲಕ್ಷ ರೂ.ಗಳನ್ನು ವಂಚಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಆರೋಪಿಯು ವಿದ್ಯಾರ್ಥಿಗಳಿಂದ ತಲಾ 30,000 ರೂ.ಶಿಕ್ಷಣ ಶುಲ್ಕವನ್ನು ಪಡೆದಿದ್ದ. ಜೊತೆಗೆ ಹೊಸದಾಗಿ ಶಾಲೆಗೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಗಳಿಂದ ದೇಣಿಗೆಗಳನ್ನೂ ಸಂಗ್ರಹಿಸಿದ್ದ. ಶಾಲೆಯು ಹೊಸ ಶೈಕ್ಷಣಿಕ ವರ್ಷಕ್ಕಾಗಿ ಜು.2ರಂದು ಆರಂಭಗೊಳ್ಳಬೇಕಿತ್ತು. ಅದರ ಮೊದಲೇ ಆರೋಪಿಯು ಶಾಲೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ. ಪೋಷಕರು ಕಳೆದ ಮೇ ತಿಂಗಳಿನಲ್ಲೇ ತಮ್ಮ ಮಕ್ಕಳ ಶುಲ್ಕಗಳನ್ನು ಪಾವತಿಸಿದ್ದರು.
ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಾಲಾ ಮಾಲಿಕನಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Next Story





