‘ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಅನಿವಾರ್ಯ’
ಬೆಂಗಳೂರು, ಜು. 20: ತಂತ್ರಜ್ಞಾನವಿಂದು ನಮ್ಮ ಅವಿಭಾಜ್ಯ ಅಂಗ. ಸ್ಪರ್ಧಾತ್ಮಕ ಯುಗದಲ್ಲಿ, ಮಾರುಕಟ್ಟೆಯಲ್ಲಿ ಉಳಿಯಬೇಕಾದರೆ ತಂತ್ರಜ್ಞಾನ ಅಳವಡಿಕೆ ಅನಿವಾರ್ಯ ಎಂದು ರಿಲಾಯನ್ಸ್ ಮನಿಯ ಕಾರ್ಯಕಾರಿ ನಿರ್ದೇಶಕ ಮತ್ತು ಸಿಇಓ ದೇವಾಂಗ್ ಮೋದಿ ಹೇಳಿದ್ದಾರೆ.
ಫೈನಾನ್ಷಿಯಲ್ ಕಂಪೆನಿ(ಎನ್‌ಬಿಎಫ್‌ಸಿ)ಗಳು ವ್ಯವಹಾರಗಳು ಮತ್ತು ವ್ಯಕ್ತಿಗತವಾದ ಹಣಕಾಸು ಅಗತ್ಯತೆಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅಂದರೆ, ಸಾಂಪ್ರದಾಯಿಕ ಬ್ಯಾಂಕುಗಳಿಂದ ಸೇವೆಯಿಂದ ವಂಚಿತವಾದ ವ್ಯಕ್ತಿಗಳಿಗೆ ಹಣಕಾಸು ಸೇವೆಗಳನ್ನು ನೀಡುತ್ತಿವೆ. ಕೆಲವು ವರ್ಷಗಳ ಹಿಂದೆ ಎನ್‌ಬಿಎಫ್‌ಸಿಗಳು ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನಗಳನ್ನು ಮಾಡುತ್ತಿವೆಂಬ ಅಪವಾದವಿತ್ತು. ಆದರೆ, ಇದೀಗ ತಮ್ಮ ಗ್ರಾಹಕರಿಗೆ, ಹಾಲಿ ಮತ್ತು ಹೊಸ ಗ್ರಾಹಕರಿಗೆ ಅತ್ಯಂತ ತ್ವರಿತವಾಗಿ ಅಡೆತಡೆಗಳಿಲ್ಲದೆ ಸೇವೆಗಳನ್ನು ಒದಗಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
Next Story





