ಮೈಸೂರು: ನಾಪತ್ತೆಯಾಗಿದ್ದ ಉಪನ್ಯಾಸಕಿ ಶವವಾಗಿ ಪತ್ತೆ
ಮೈಸೂರು,ಜು.20: ನಾಪತ್ತೆಯಾಗಿದ್ದ ಉಪನ್ಯಾಸಕಿಯೊಬ್ಬರು ಕಬಿನಿ ಹಿನ್ನೀರಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ದೀಪಿಕಾ(29) ಎಂದು ಗುರುತಿಸಲಾಗಿದ್ದು, ಮೈಸೂರು ನಗರ ಗಾಯಿತ್ರಿ ಪುರಂ ನಿವಾಸಿಯಾಗಿದ್ದಾರೆ.
ಕಳೆದ ಸೋಮವಾರವಷ್ಟೆ ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೋಗಿದ್ದ ದೀಪಿಕಾ ಮನೆಗೆ ಹಿಂದಿರುಗಿರಲಿಲ್ಲ. ಈ ಸಂಬಂಧ ಆಕೆಯ ಮನೆಯವರು ನಜರ್ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆದರೆ ಬೀಚನಹಳ್ಳಿ ಬಳಿಯ ಕಬಿನಿ ಹಿನ್ನೀರಿನಲ್ಲಿ ಮೃತ ಮಹಿಳೆ ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಮೃತ ಮಹಿಳೆಯ ಪೋಷಕರು ಇದೊಂದು ಕೊಲೆ ಎಂದು ಆರೋಪಿಸಿ ಕೆ.ಆರ್.ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು.
Next Story