ಮಂಗಳೂರು : ನಗರದಲ್ಲಿ ಗ್ರಾಮೀಣ ಸಂತೆ ಆರಂಭ

ಮಂಗಳೂರು, ಜು.20:ನಗರದ ಭಾರತೀಯ ವಿದ್ಯಾಭವನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಗ್ರಾಮೀಣ ಸಂತೆ ಕರಕುಶಲ ಹಾಗೂ ಸಾವಯವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಇಂದು ಉದ್ಘಾಟಿಸಿದರು.
ಪ್ರಥಮ ದಿನ ಉತ್ತಮ ಪ್ರತಿಕ್ರಿಯೆ: ಪ್ರಥಮ ದಿನ ಉತ್ತಮ ಪ್ರತಿಕ್ರೀಯೆ ದೊರೆತಿದೆ ಎಂದು ಸಂಘಟಕರಾದ ಲೈನ್ಕಜೆ ರಾಮಚಂದ್ರ ತಿಳಿಸಿದ್ದಾರೆ. ಸಿರಿಧಾನ್ಯ ಬಳಗದ ದೋಸೆ,ಕೇರಳದ ಸಿಹಿ ತಿನಿಸು,ಹೆಗ್ಗೋಡಿನ ಖಾದಿ ಭಂಡಾರದ ಖಾದಿ ಬಟ್ಟೆಗಳಿಗೆ,ಮಂಗಳೂರಿನ ಚಾಕಲೇಟ್,ವಿವಿಧ ರೀತಿಯ ಉಪ್ಪಿನ ಕಾಯಿ ಹಾಗೂ ಗೃಹೋಪಯೋಗಿ ಉತ್ಪನ್ನಗಳು ತಾಮ್ರ,ಹಿತ್ತಾಳೆ ಮಣ್ಣಿನ ಪಾತ್ರೆಗಳ ಸಂಗ್ರಗಳು ಪ್ರದರ್ಶನ ಮೇಳದಲ್ಲಿದೆ ಎಂದು ರಾಮಚಂದ್ರ ತಿಳಿಸಿದ್ದಾರೆ.
ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ,ಗ್ರಾಮೀಣ ಸಂತೆ ಒಕ್ಕೂಟದ ಗೌರವಾಧ್ಯಕ್ಷ ಲೈನ್ಕಜೆ ರಾಮಚಂದ್ರ,ಸಾವಯವ ಬಳಗದ ಸದಾಶಿವ ರಾವ್,ಅರ್‌ವಿನ್ ಡಿ ಸೋಜ ಮೊದಲಾದವರು ಉಪಸಿತರಿದ್ದರು.
Next Story





