ಲಿಂಗದಹಳ್ಳಿ: ಗುಡ್ಡ ಕುಸಿದು ಕೆಮ್ಮಣ್ಣಗುಂಡಿ ಗಿರಿಧಾಮ ರಸ್ತೆ ಬಂದ್

ಲಿಂಗದಹಳ್ಳಿ, ಜು.20: ಹಲವು ದಿನಗಳಿಂದ ಅತಿಯಾಗಿ ಬೀಳುತ್ತಿರುವ ಮಳೆಯಿಂದಾಗಿ ಕೆಮ್ಮಣ್ಣ ಗುಂಡಿ ಗಿರಿಧಾಮದ ರಸ್ತೆಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಗೇಸ್ಟ್ ಹೌಸ್ ಸಮೀಪದ ಮುಖ್ಯ ರಸ್ತೆಗೆ ಗುಡ್ಡ ಕುಸಿದು ಬಿದ್ದಿದೆ. ಕಳೆದ ಕೆಲ ದಿನಗಳಿಂದ ಗಿರಿಧಾಮದ ಸಂಪರ್ಕ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ರಸ್ತೆಗೆ ಬಿದ್ದಿರುವ ಮಣ್ಣನ್ನು ಲೋಕಪಯೋಗಿ ಇಲಾಖೆ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ.
ಹೋಬಳಿಯ ಲಾಲಬಾಗ್ ಕಾಫಿ ತೋಟದ ಬಳಿಯೂ ಸಹ ಧರೆ ಕುಸಿತ ಉಂಟಾಗಿ ರಸ್ತೆಗೆ ಮಣ್ಣು ಬಿದ್ದ ಕಾರಣ ಭದ್ರ ಕಾಫಿ ತೋಟ ಭೈರೆಖಾನ್, ದೊಡ್ಡಖಾನ್ ಸೇರಿದಂತೆ ನಂದಿ ಗಾವೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಬಂದ್ ಆಗಿದ್ದು ಈ ಭಾಗದ ಗ್ರಾಮಸ್ಥರು ಮತ್ತು ಕಾಫಿ ತೋಟದ ಕಾರ್ಮಿಕರುಗಳಿಗೆ ತೊಂದರೆಯಾಗಿದ್ದು, ರಸ್ತೆ ದಾಟಿ ಬರುವುದಕ್ಕೆ ಹತ್ತಾರು ಕಿ.ಲೋ ಮೀಟರ್‌ಗಳಷ್ಟು ದೂರ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಗಿದೆ.
Next Story





