ತೃಣಮೂಲ ಕಾಂಗ್ರೆಸ್ ಸೇರಿದ ಮಾಜಿ ಬಿಜೆಪಿ ಸಂಸದ ಚಂದನ್ ಮಿತ್ರಾ
ಹೊಸದಿಲ್ಲಿ, ಜು.21: ಮಾಜಿ ಬಿಜೆಪಿ ಸಂಸದ ಚಂದನ್ ಮಿತ್ರಾ ಹಾಗು ಇತರ ನಾಲ್ವರು ಕಾಂಗ್ರೆಸ್ ಶಾಸಕರು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಸಮರ್ ಮುಖರ್ಜಿ, ಅಬು ತಾಹಿರ್, ಸಬೀನಾ ಯಾಸ್ಮಿನ್ ಹಾಗು ಅಖುರುಝ್ಝಮಾನ್ ಟಿಎಂಸಿಗೆ ಸೇರ್ಪಡೆಯಾದ ಕಾಂಗ್ರೆಸ್ ಶಾಸಕರು. ಕೆಲದಿನಗಳ ಹಿಂದಷ್ಟೇ ಮಿತ್ರಾ ಬಿಜೆಪಿಗೆ ರಾಜೀನಾಮೆ ನೀಡಿದ್ದರು.
Next Story