ಮಂಗಳೂರು : ಹಜ್ ಯಾತ್ರಾರ್ಥಿಗಳ ಪ್ರಥಮ ತಂಡಕ್ಕೆ ಹಸಿರು ನಿಶಾನೆ

ಮಂಗಳೂರು, ಜು.21: ಬಜ್ಪೆ ಅನ್ಸಾರಿ ಶಾಲೆಯ ಮೈದಾನದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಸ್ಸಿನಲ್ಲಿ ಹೊರಟ ಹಜ್ ಯಾತ್ರಾರ್ಥಿಗಳ ಪ್ರಥಮ ತಂಡಕ್ಕೆ ಶನಿವಾರ ಸಂಜೆ ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಹಾಜಿ ಎಸ್.ಎಂ.ರಶೀದ್ ಚಾಲನೆ ನೀಡಿದರು.
ಈ ಸಂದರ್ಭ ರಾಜ್ಯ ಹಜ್ ಕಮಿಟಿಯ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಹಜ್ ನಿರ್ವಹಣಾ ಸಮಿತಿಯ ಪ್ರಮುಖರಾದ ಹನೀಫ್ ಹಾಜಿ ಬಂದರ್, ಸಿ. ಮಹ್ಮೂದ್ ಹಾಜಿ, ಹಾಜಿ ಸಿ.ಎಚ್. ಉಳ್ಳಾಲ, ಹನೀಫ್ ಬಜ್ಪೆ, ಸಾಲಿ ಬಜ್ಪೆ, ರಫೀಕ್ ಮಂಗಳೂರು, ಕರಾವಳಿಯ ವಲಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯು.ಬಿ. ಸಲೀಂ ಮತ್ತಿತರರು ಉಪಸ್ಥಿತರಿದ್ದರು.
Next Story





