ಹಾಜಿ ಗೋಲ್ಡ್‌ನಿಂದ ಲಕ್ಸುರಿ ಫೋನ್‌ಗಳ ಬಿಡುಗಡೆ

ಮಂಗಳೂರು, ಜು.21: ಹಾಜಿ ಗೋಲ್ಡ್‌ನಿಂದ ಮೂರು ಲಕ್ಸುರಿ ಫೋನ್‌ಗಳನ್ನು ನಗರದ ಏರ್‌ಪೋರ್ಟ್ ರಸ್ತೆಯ ಸುಂದರ್ ಮೋಟರ್ಸ್‌ನಲ್ಲಿ ಶನಿವಾರ ಬೆಳಗ್ಗೆ ಬಿಡುಗಡೆಗೊಳಿಸಲಾಯಿತು.
ಲಕ್ಸುರಿ ಫೋನ್ ಕಲರ್ ಗ್ಲಾಸನ್ ಸೀರೀಸ್ ನ್ನು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಬಿಡುಗಡೆಗೊಳಿಸಿದರು. ಗೋಲ್ಡ್ ಕಲರ್ ಫೋನ್‌ನ್ನು ಮೋತಿಶಾಮ್ ಬಿಲ್ಡರ್ಸ್‌ನ ಹರ್ಷದ್ ಬಿಡುಗಡೆಗೊಳಿಸಿದರು. ಕಲರ್ ಗ್ಯಾಜಮ್‌ನ್ನು ಸೌದ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಹಾಜಿ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಸಂಸ್ಥಾಪಕ ಸಂಸ್ಥೆಯ ಪಾಲುದಾರ ಮುಹಮ್ಮದ್ ಶಹಬುದ್ದೀನ್, ಎನ್.ಎಸ್.ಕರೀಮ್, ಮರ್ಸಿಡೀಸ್‌ನ ಸೇಲ್ಸ್ ಹೆಡ್ ಮಹೇಶ್ ಕೆ.ವಿ., ಪಿಂಕೇಶ್ ಬಾಂಬೆ ಮತ್ತಿತರ ಗಣ್ಯರು ಇದ್ದರು.
Next Story





