ಕಾರು ಢಿಕ್ಕಿ: ವ್ಯಕ್ತಿಗೆ ಗಾಯ
ಮಂಗಳೂರು, ಜು.21: ರಸ್ತೆ ದಾಟಲೆಂದು ನಿಂತಿದ್ದ ವ್ಯಕ್ತಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಗಾಯಗೊಂಡ ಘಟನೆ ಮುಲ್ಕಿಯ ಕಾರ್ನಾಡ್ ಭಾರತ್ ಶೋರೂಮ್ ಎದುರು ಶನಿವಾರ ನಡೆದಿದೆ.
ಕಾರ್ನಾಡ್ ನಿವಾಸಿ ವಾಸು ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಮುಲ್ಕಿಯ ಕಾರ್ನಾಡ್ ಭಾರತ್ ಶೋರೂಮ್ ಎದುರು ರಾ.ಹೆ. 66ನ್ನು ದಾಟಲೆಂದು ವಾಸು ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಉಡುಪಿಯಿಂದ ಮಂಗಳೂರು ಮಾರ್ಗವಾಗಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಅಬ್ದುಲ್ ಸಮದ್ ಗಾಯಾಳು ವಾಸುಗೆ ಢಿಕ್ಕಿ ಹೊಡೆಸಿದ್ದಾರೆ. ಪರಿಣಾಮ ವಾಸು ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





