ಶಾಸಕನ ಕಚೇರಿ ಮುಂಭಾಗ 'ಪ್ರೇಮ'ಕುಮಾರಿ ಆತ್ಮಹತ್ಯೆಗೆ ವಿಫಲ ಯತ್ನ

ಮೈಸೂರು,ಜು.21: ಶಾಸಕ ಎಸ್.ಎ.ರಾಮದಾಸ್ ಕಚೇರಿ ಮುಂಭಾಗ ಪ್ರೇಮಕುಮಾರಿ ಆತ್ಮಹತ್ಯೆಗೆ ಯತ್ನಿಸಿ ರಂಪಾಟ ಮಾಡಿದ ಘಟನೆ ನಡೆದಿದೆ.
ವಿದ್ಯಾರಣ್ಯಪುರಂ ನಲ್ಲಿರುವ ಶಾಸಕ ರಾಮದಾಸ್ ಕಚೇರಿ ಮುಂಭಾಗ ದಿಢೀರನೆ ಬಂದ ಪ್ರೇಮಕುಮಾರಿ ಏಕಾಏಕಿ ತಾನು ತೊಟ್ಟಿದ್ದ ಚೂಡಿದಾರ್ ವೇಲ್‍ನಿಂದ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಆಕೆಯನ್ನು ಬಚಾವ್ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಮಾತನಾಡಿದ ಪ್ರೇಮಕುಮಾರಿ 'ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಈಗ ಮೋಸ ಮಾಡುತ್ತಿದ್ದಾರೆ. ಚುನಾವಣೆ ಪೂರ್ವದಲ್ಲಿ ನನಗೆ ಮದುವೆಯಾಗುವುದಾಗಿ ಭರವಸೆ ನೀಡಿ ಈಗ ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದಾರೆ. ನನಗೆ ರಾಮದಾಸ್ ನೋಡಲು ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ನಾವು ಸಾಯುವುದಾಗಿ ಬೆದರಿಕೆಯೊಡ್ಡಿದರು ಎಂದು ತಿಳಿದುಬಂದಿದೆ.
Next Story