ಕಡೂರು: ಕಾರು ಢಿಕ್ಕಿಯಾಗಿ ಬಾಲಕಿ ಮೃತ್ಯು
ಕಡೂರು, ಜು.23: ತಾಲೂಕಿನ ಚಿಕ್ಕದೇವನೂರು ಗ್ರಾಮದ ಬಳಿ ಕಾರು ಢಿಕ್ಕಿಯಾಗಿ ಸುಹಾನಾ(8) ಎಂಬ ಬಾಲಕಿ ಮೃತಪಟ್ಟ ಘಟನೆ ನಡೆದಿದೆ.
ಚಿಕ್ಕದೇವನೂರು ಬಳಿ ಇರುವ ಕೋಳಿ ಫಾರಂಗೆ ಹೋಗುತ್ತಿದ್ದ ಇಲಿಯಾಸ್ ಮತ್ತು ಶಂಶಾದ್ ಎಂಬವರ ಪುತ್ರಿ ಸುಹಾನಾಗೆ ಚಿಕ್ಕದೇವನೂರು ಕಡೆಯಿಂದ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದ್ದು, ಪರಿಣಾಮ ಸುಹಾನಾಗೆ ತೀವ್ರ ಗಾಯಗಳಾಗಿವೆ. ಆಕೆಯನ್ನು ಕೂಡಲೇ ಬಾಣಾವರ ಮತ್ತು ಅರಸೀಕೆರೆ ಆಸ್ಪತ್ರೆಗಳಿಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯುವ ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.
ಈ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story