ಮಂಡ್ಯ: ಹಾಡಹಗಲೇ ಮನೆಯ ಬೀಗ ತೆಗೆದು ಚಿನ್ನಾಭರಣ ಕಳವು
ಮಂಡ್ಯ, ಜು.23: ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ನಾಯಸಿಂಗನಹಳ್ಳಿ ಗ್ರಾಮದಲ್ಲಿ ಹಾಡಹಗಲೇ ಮನೆಯ ಬೀಗ ತೆಗೆದು ಕಳ್ಳತನ ಮಾಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ದಿನೇಶ್ ಎಂಬವರ ಮನೆಯ ಬೀಗ ತೆಗೆದು 8 ಗ್ರಾಂನ ಎರಡು ಉಂಗುರ, 6 ಗ್ರಾಂನ ಸರ, 8 ಗ್ರಾಂ ಓಲೆ, ಮಕ್ಕಳ ಎರಡು ಉಂಗುರ, ಹಣ ಕಳವು ಮಾಡಿದ್ದು, ಈ ಬಗ್ಗೆ ದಿನೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮನೆಯ ಬೀಗದ ಕೀ ಅಲ್ಲೆ ಇಟ್ಟು ಎಂದಿನಂತೆ ಕೂಲಿ ಕೆಲಸಕ್ಕೆ ತೆರೆಳಿದ್ದ ದಿನೇಶ್, ನಂತರ ಊಟಕ್ಕೆ ಬಂದು ನೋಡಿದಾಗ ಮನೆಯ ಬೀಗ ತೆರದಿರುವುದು ಕಂಡು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಎಂದಿನಂತೆ ಮಕ್ಕಳು ಶಾಲೆಯಿಂದ ಬರುತ್ತಾರೆಂದು ಕೀಯನ್ನು ಅಲ್ಲಿಯೇ ಇಟ್ಟು ದಿನೇಶ್ ದಂಪತಿ ಕೂಲಿ ಕೆಲಸಕ್ಕೆ ತೆರಳಿದ್ದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





