ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ: ಚಂದ್ರಶೇಖರ ಭಟ್

ಹೆಬ್ರಿ, ಜು.2: ತಮ್ಮ ಮಕ್ಕಳನ್ನು ಕೇವಲ ಅಂಕಗಳಿಕೆಯ ಯಂತ್ರವಾಗಿಸದೇ ಅವರನ್ನು ಸಂಗೀತ, ನಾಟ್ಯ, ಚಿತ್ರಕಲೆ, ಕ್ರೀಡೆ ಮೊದಲಾದ ಪಠ್ಯೇತರ ಚಟು ವಟಿಕೆಯಲ್ಲಿ ತೊಡಗಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸಿ, ಮಾನಸಿಕ ನೆಮ್ಮದಿ, ದೈಹಿಕ ಬೆಳವಣಿಗೆ ಹಾಗೂ ಏಕಾಗ್ರತೆಗೆ ಶಾಸೀಯ ಸಂಗೀತ ದೊಂದಿಗೆ ಭರತನಾಟ್ಯ ಕಲಿಕೆ ಉತ್ತಮ ಎಂದು ಮುದ್ರಾಡಿ ಪ್ರೌಢಶಾಲಾ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಹೇಳಿದ್ದಾರೆ.
ಹೆಬ್ರಿ ಮುಖ್ಯ ರಸ್ತೆಯ ಶ್ರೀರಾಮ್ ಟವರ್‌ನಲ್ಲಿರುವ ಚಾಣಕ್ಯ ಟ್ಯುಟೋರಿ ಯಲ್ ಕಾಲೇಜಿನಲ್ಲಿ ಆರಂಭವಾದ ಭರತನಾಟ್ಯ ತರಗತಿಯನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮೂಡುಬಿದರೆ ಆರಾಧನಾ ನೃತ್ಯಕೇಂದ್ರದ ನಿರ್ದೇಶಕಿ ಸುಖದಾ ಬರ್ವೆ, ಶಾಸೀಯ ಸಂಗೀತ ಗುರು ಪೂರ್ಣಿಮಾ ಗೋರೆ, ಟ್ರ್ಯಾಕ್ ಸಂಗೀತ ಗುರು ಮುಟ್ಲು ಪಾಡಿ ಉದಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ಸ್ವಾಗತಿಸಿ ದರು. ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು. ಶಿಕ್ಷಕಿ ಪೂರ್ಣಿಮಾ ಶೆಟ್ಟಿ ವಂದಿಸಿದರು.





