ಸೈಂಟ್ ಆನ್ಸ್ ಕಾರ್ಮೆಲ್ ಶಾಲೆ ಆವರಣ ಗೋಡೆ ಕುಸಿತ
ಐವನ್ ಡಿಸೋಜ ಭೇಟಿ, ಪರಿಶೀಲನೆ

ಮಂಗಳೂರು, ಜು.23: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ನಗರದ ಪಾಂಡೇಶ್ವರದಲ್ಲಿನ ಸೈಂಟ್ ಆನ್ಸ್ ಕಾರ್ಮೆಲ್ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣ ಗೋಡೆ ಕುಸಿದಿದೆ. ಈ ಪ್ರದೇಶಕ್ಕೆ ಶಾಸಕ ಐವನ್ ಡಿಸೋಜ ಭೇಟಿ ನೀಡಿ, ಪರಿಶೀಲಿಸಿದರು.
40 ಅಡಿ ಎತ್ತರದ ಗೋಡೆ ಕುಸಿದು ಪಕ್ಕದಲ್ಲಿರುವ ಹಾಸ್ಟೆಲ್ ಕಾಂಪ್ಲೆಕ್ಸ್ ಕಟ್ಟಡಕ್ಕೆ ಒರಗಿ ನಿಂತಿದೆ. ಹಾಸ್ಟೆಲ್ ಅಪಾಯದ ಅಂಚಿನಲ್ಲಿದ್ದು, ತುರ್ತು ಕ್ರಮ ಕೈಗೊಳ್ಳಲು ಶಾಲಾ ಮುಖ್ಯಸ್ಥರು ಮನವಿ ಮಾಡಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ವಿಧಾನ ಪರಿಷತ್ ಸದಸ್ಯ ಐವನ ಡಿಸೋಜ ಭರವಸೆ ನೀಡಿದರು. ಈ ಸಂದರ್ಭ ತಹಶೀಲ್ದಾರ್ ಗುರುಪ್ರಸಾದ್ ಇದ್ದರು.
Next Story