ಶಿರೂರುಶ್ರೀ ಇಲ್ಲದೇ ಸೊರಗಿದ ತಪ್ತ ಮುದ್ರಾಧಾರಣೆ

ಉಡುಪಿ, ಜು.23: ಶ್ರೀ ಕೃಷ್ಣ ಮಠದಲ್ಲಿ ಶಯನೀ ಏಕಾದಶಿ ಪ್ರಯುಕ್ತ ಸೋಮವಾರ ತಪ್ತ ಮುದ್ರಾಧಾರಣೆ ನಡೆಯಿತು. ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀ ಹಾಗೂ ಅದಮಾರು ಮಠದ ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯ ತೀರ್ಥ ಶ್ರೀ ನೂರಾರು ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು.
ಆದರೆ ಯಾವತ್ತೂ ರಥಬೀದಿಯಲ್ಲಿರುವ ತಮ್ಮ ಶಿರೂರು ಮಠದಲ್ಲಿ ಬರುವ ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ಮಾಡುತಿದ್ದ ಶ್ರೀಲಕ್ಷ್ಮೀವರ ತೀರ್ಥರಿಲ್ಲದೇ ಶಿರೂರು ಮಠ ಇಂದು ಬಿಕೋ ಎನ್ನುತ್ತಿತ್ತು. ಯಾವತ್ತೂ ಶ್ರೀಗಳಿಂದ ಮುದ್ರೆಯನ್ನು ಹಾಕಿಸಿಕೊಳ್ಳಲು ಜನರು ಶಿರೂರು ಮಠದಲ್ಲಿ ಕ್ಕಿಕ್ಕಿರಿದು ನೆರೆಯುತ್ತಿದ್ದರು. ಈ ಬಾರಿ ಮಠಕ್ಕೆ ಯಾರಿಗೂ ಪ್ರವೇಶವಿರಲಿಲ್ಲ.
ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀ ತಮ್ಮ ಮಠದಲ್ಲಿ ಬಂದ ಭಕ್ತರಿಗೆ ತಪ್ತ ಮುದ್ರಾಧಾರಣೆ ನಡೆಸಿದರು.
Next Story





