ನೆವಾಡ: ಚರ್ಚ್‌ನಲ್ಲಿ ಗುಂಡು ಹಾರಾಟ; ಓರ್ವ ಸಾವು

ನೆವಾಡ (ಅಮೆರಿಕ), ಜು. 23: ಅಮೆರಿಕದ ನೆವಾಡದಲ್ಲಿ ರವಿವಾರ ಮೋರ್ಮೊನ್ ಚರ್ಚೊಂದರ ಮೇಲೆ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ.
48 ವರ್ಷದ ಜಾನ್ ಕೆಲ್ಲಿ ಓಕಾನರ್ ಚರ್ಚ್‌ಗೆ ಬಂದು ಗುಂಡು ಹಾರಿಸಿದ್ದಾನೆ ಎಂದು ಫಾಲನ್ ಪೊಲೀಸ್ ಮುಖ್ಯಸ್ಥ ಕೆವಿನ್ ಗೆಹ್ಮನ್ ಹೇಳಿದರು.
ಪೊಲೀಸರು ಬಳಿಕ ಅವನ ಮನೆಗೆ ಹೋಗಿ ಶರಣಾಗುವಂತೆ ಸೂಚಿಸಿದಾಗ ಶರಣಾದನು ಎಂದು ‘ಕೊಲೊ’ ಟಿವಿ ವರದಿ ಮಾಡಿದೆ.
Next Story





