ಮಹಿಳೆಯ ಜೀವಕ್ಕೆ ಕುತ್ತಾದ ಆನ್ ಲೈನ್ ಖರೀದಿ!

ಬೀಜಿಂಗ್, ಜು. 23: ಚೀನಾದ ಮಹಿಳೆಯೊಬ್ಬರು ಸಾಂಪ್ರದಾಯಿಕ ಹಾವಿನ ವೈನ್ ತಯಾರಿಸಲು ನಿರ್ಧರಿಸಿದರು. ಅದರಂತೆ ವಿಷ ಸರ್ಪವೊಂದನ್ನು ಆನ್‌ಲೈನ್‌ನಲ್ಲಿ ಖರೀದಿಸಿದರು. ಆದರೆ ಆ ಹಾವು ಮಹಿಳೆಗೆ ಕಚ್ಚಿದ್ದು ಅವರು ಮೃತಪಟ್ಟಿದ್ದಾರೆ.
21 ವರ್ಷದ ಮಹಿಳೆಯು ಹಾವು ಕಚ್ಚಿದ 8 ದಿನಗಳ ಬಳಿಕ ಕಳೆದ ವಾರದ ಮಂಗಳವಾರ ಕೊನೆಯುಸಿರೆಳೆದರು ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆನ್‌ಲೈನ್‌ನಲ್ಲಿ ವನ್ಯಜೀವಿಗಳ ಮಾರಾಟವನ್ನು ಚೀನಾ ನಿಷೇಧಿಸಿದೆಯಾದರೂ, ದಂಧೆ ನಡೆಯುತ್ತಿದೆ.
ಹಾವು ಒಳಗೊಂಡ ಪೆಟ್ಟಿಗೆಯನ್ನು ಸ್ಥಳೀಯ ಕೊರಿಯರ್ ಸಂಸ್ಥೆಯೊಂದು ಮಹಿಳೆಗೆ ಹಸ್ತಾಂತರಿಸಿತ್ತು. ಪೆಟ್ಟಿಗೆಯಿಂದ ಹೊರಗೆ ಹಾವನ್ನು ತೆಗೆಯುವಾಗ ಅದು ಮಹಿಳೆಗೆ ಕಚ್ಚಿದೆ.
Next Story





