ಐಯುಎಂಎಲ್‌ನ ಬಾವುಟ ಬದಲಾವಣೆ ಸಾಧ್ಯತೆ

ತಿರುವನಂತಪುರ, ಜು. 23: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ತನ್ನ ಬಾವುಟವನ್ನು ಬದಲಾಯಿಸುವ ಸಾಧ್ಯತೆ ಇದೆ. ಉತ್ತರಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್‌ನ ಅಧ್ಯಕ್ಷ ಸೈಯದ್ ವಸೀಮ್ ರಿಝ್ವಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿರುವುದು ಐಯುಎಂಎಲ್ ಬಾವುಟ ಬದಲಾವಣೆಗೆ ಚಿಂತಿಸಲು ಪ್ರಮುಖ ಕಾರಣ. ಪಾಕಿಸ್ತಾನ ಮುಸ್ಲಿಂ ಲೀಗ್ ಬಾವುಟವನ್ನು ಹೋಲುವ ಈ ಬಾವುಟದಲ್ಲಿ ಇಸ್ಲಾಮಿಕ್ ಆದುದು ಏನೂ ಇಲ್ಲ ಎಂದು ರಿಝ್ವಿ ಹೇಳಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರ ನಿಲುವು ವ್ಯಕ್ತಪಡಿಸುವಂತೆ ನಿರ್ದೇಶಿಸಿತ್ತು. ಇಂತಹ ಬಾವುಟಗಳನ್ನು ಆರೋಹಣ ಮಾಡುವುದು ‘ಇಸ್ಲಾಂ ವಿರುದ್ಧ’ ಹಾಗೂ ಇದರಿಂದ ದೇಶದ ವಿವಿಧ ಭಾಗಗಳಲ್ಲಿ ಕೋಮ ಗಲಭೆ ಸಂಭವಿಸಿದೆ ಎಂದು ರಿರಿ್ವು ಹೇಳಿದ್ದಾರೆ.
Next Story





