ಕೊಪ್ಪ: ಪತ್ರ ಬರೆದಿಟ್ಟು ಹೊಳೆಗೆ ಹಾರಿದ ಯುವಕ
ಕೊಪ್ಪ, ಜು.23: ಕೊಪ್ಪ ತಾಲೂಕಿನ ಮರಿದೋಟ್ಲು ಗ್ರಾಮ ಪಂಚಾಯತ್ ನ ಕಾಚ್‍ಗಲ್ ಕಿರಣ್ ಕುಮಾರ್ (22) ಹೊಳೆಗೆ ಹಾರಿರುವ ಘಟನೆ ಸೋಮವಾರ ನಡೆದಿದೆ.
ನಾರಾಯಣ ಪೂಜಾರಿ ಮಗನಾದ ಕಿರಣ್ ಕುಮಾರ್ ಡೈವಿಂಗ್ ವೃತ್ತಿ ಮಾಡಿಕೊಂಡಿದ್ದು, ಸೋಮವಾರ ಹರಿಹರಪುರ ಸಮೀಪದ ನಗಲಪುರ ಸೇತುವೆ ಬಳಿ ಬೈಕ್ ಮತ್ತು ಚಪ್ಪಲಿ ಜೊತೆಗೆ ಪತ್ರವೊಂದನ್ನು ಬರೆದಿಟ್ಟು ನದಿಗೆ ಹಾರಿದ್ದಾನೆ ಎನ್ನಲಾಗಿದೆ
ಪತ್ರದಲ್ಲಿ ತನ್ನ ಬೈಕ್‍ನ್ನು ಮನೆಗೆ ತಲುಪಿಸಿ ಎಂದು ಬರೆದಿಟ್ಟಿದ್ದಾನೆ. ಘಟನೆಗೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ, ನಿರಂತರ ಮಳೆಯಾಗುತ್ತಿರುವುದರಿಂದ ಕಿರಣ್ ಕುಮಾರ್ ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದ್ದು, ಮಂಗಳವಾರ ಮುಳುಗು ತಜ್ಞರಿಂದ ಶೋಧ ಕಾರ್ಯ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಹರಿಹಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





