ಭಾರೀ ಮಳೆಗೆ ಒಡೆದ ಅಣೆಕಟ್ಟು: 100ಕ್ಕೂ ಅಧಿಕ ಮಂದಿ ನಾಪತ್ತೆ
ಹಲವರು ಸಾವನ್ನಪ್ಪಿರುವ ಶಂಕೆ

ಬ್ಯಾಂಕಾಕ್, ಜು.24: ನಿರ್ಮಾಣ ಹಂತದಲ್ಲಿದ್ದ ಅಣೆಕಟ್ಟೊಂದು ಕುಸಿದ ಪರಿಣಾಮ 100ಕ್ಕೂ ಅಧಿಕ ಜನರು ಮಂದಿ ನಾಪತ್ತೆಯಾಗಿದ್ದು, ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಂಕಾಕ್ ನ ಲಾವೋಸ್ ನಲ್ಲಿ ಈ ಘಟನೆ ನಡೆದಿದೆ.
ಅಣೆಕಟ್ಟು ಒಡೆದ ಪರಿಣಾಮ ಭಾರೀ ಪ್ರಮಾಣದ ನೀರು ನುಗ್ಗಿದ್ದು, ಮನೆಗಳು ಕೊಚ್ಚಿಕೊಂಡು ಹೋಗಿವೆ. 6,600ಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಪ್ರವಾಹದಿಂದ ತಮ್ಮನ್ನು ಕಾಪಾಡಿಕೊಳ್ಳಲು ಜನರು ಮರದ ತಾತ್ಕಾಲಿಕ ದೋಣಿಗಳನ್ನು ಬಳಸುತ್ತಿರುವುದು, ಮನೆಯ ಮೇಲೆ ನಿಂತಿರುವ ಫೋಟೊಗಳನ್ನು ಮಾಧ್ಯಮಗಳು ಪ್ರಕಟಿಸಿವೆ.
ಅಟ್ಟಾಪೂ ಪ್ರಾಂತ್ಯದಲ್ಲಿ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಬೋಟ್ ಗಳನ್ನು ಬಳಸುತ್ತಿದ್ದಾರೆ. ಭಾರೀ ಮಳೆ ಹಾಗು ಪ್ರವಾಹವೇ ಅಣೆಕಟ್ಟು ಒಡೆಯಲು ಕಾರಣ ಎಂದು ಅಣೆಕಟ್ಟು ನಿರ್ಮಿಸಿದ್ದ ಕಂಪೆನಿ ಪ್ರತಿಕ್ರಿಯಿಸಿದೆ.
Next Story





