ದಾವಣಗೆರೆ: ಅಪಘಾತದ ಗಾಯಾಳುಗಳನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ ಶಾಸಕ ರಾಮಪ್ಪ
ದಾವಣಗೆರೆ,ಜು.24: ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಅದೇ ದಾರಿಯಲ್ಲಿ ಸಾಗುತ್ತಿದ್ದ ಹರಿಹರ ಶಾಸಕ ಎಸ್. ರಾಮಪ್ಪ ತಕ್ಷಣವೇ ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಂಗಳವಾರ ಹರಿಹರ ನಗರದ ಮುಖ್ಯರಸ್ತೆಯಲ್ಲಿ ಎರಡು ಬೈಕ್‍ಗಳ ನಡುವೆ ಢಿಕ್ಕಿಯಾಗಿ ನಾಲ್ವರು ಗಾಯಗೊಂಡಿದ್ದರು. ಈ ಸಂದರ್ಭ ಇದೇ ದಾರಿಯಲ್ಲಿ ಹೋಗುತ್ತಿದ್ದ ಶಾಸಕ ರಾಮಪ್ಪ ತಕ್ಷಣ ಕಾರ್ ನಿಲ್ಲಿಸಿ ತಮ್ಮ ಕಾರಿನಲ್ಲಿಯೇ ಗಾಯಾಳುಗಳನ್ನು ಹರಿಹರ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದಲ್ಲದೇ, ಗಾಯಾಳುಗಳ ಸಂಬಂಧಿಗಳು ಬರುವ ತನಕ ಆಸ್ಪತ್ರೆಯಲ್ಲಿಯೇ ನಿಂತಿದ್ದರು. ನಂತರ ವೈದ್ಯರಿಗೆ ಸೂಕ್ತ ಚಿಕಿತ್ಸೆ ಕೊಡುವಂತೆ ಸೂಚಿಸಿದರು.
Next Story