ಮದನಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ವನಮಹೋತ್ಸವ
ಮಂಗಳೂರು, ಜು.24: ಉಳ್ಳಾಲ ಸೈಯದ್ ಮದನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್ಯಕ್ರಮವನ್ನು ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಉದ್ಘಾಟಿಸಿದರು.
ಟ್ರಸ್ಟ್‌ನ ಉಪಾಧ್ಯಕ್ಷರಾದ ಮುಸ್ತಫಾ ಅಬ್ದುಲ್ಲ, ಹಾಜಿ ಇಬ್ರಾಹೀಂ ಹಾಗೂ ಟ್ರಸ್ಟ್‌ನ ಆಡಳಿತ ಆಧಿಕಾರಿ ಹಾಜಿ ಅಬ್ದುಲ್ ಲತೀಫ್ ಮಾತನಾಡಿ ದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯ ವಿಶ್ವರಾಜ್, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಿದರು. ಕಚೇರಿ ಅಧೀಕ್ಷಕ ಅಬ್ದುಲ್ ರಹ್ಮಾನ್ ಸ್ವಾಗತಿಸಿ, ವಂದಿಸಿದರು.
Next Story





