"ಗಣೇಶ್ ಮಿಸ್ಕಿನ್ ಆರೆಸ್ಸೆಸ್ ಮುಖಂಡನಲ್ಲ"
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ

ಬೆಂಗಳೂರು, ಜು.24: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳವು ವಶಕ್ಕೆ ತೆಗೆದುಕೊಂಡಿರುವ ಗಣೇಶ್ ಮಿಸ್ಕಿನ್‌ರನ್ನು ಆರೆಸ್ಸೆಸ್ ಮುಖಂಡನೆಂದು ಬಣ್ಣಿಸಿ ಪತ್ರಿಕೆಯೊಂದರಲ್ಲಿ ವರದಿ ಮಾಡಲಾಗಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರದ ಸಂಘ ಸಂಚಾಲಕ ವಿ.ನಾಗರಾಜ ಸ್ಪಷ್ಟನೆ ನೀಡಿದ್ದಾರೆ.
ಲಕ್ಷಾಂತರ ಕಾರ್ಯಕರ್ತರು ಸಂಘದ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಸಂಘವು ಹಿಂಸೆ ಮತ್ತು ಹತ್ಯೆಯನ್ನು ಸಮರ್ಥಿಸಿದ ನಿದರ್ಶನಗಳಿಲ್ಲ. ಅಲ್ಲದೆ, ವೈಚಾರಿಕ ಭಿನ್ನಾಭಿಪಾಯವಿರುವವರನ್ನೂ ಗೌರವದಿಂದ ಕಾಣುವ ಉದಾತ್ತ ಪರಂಪರೆ ಸಂಘದ್ದಾಗಿದೆ ಎಂದು ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಂಘವನ್ನು ಎಳೆದು ತಂದಿರುವುದು ಸಮರ್ಥನೀಯವಲ್ಲ. ಗೌರಿ ಹತ್ಯೆ ನಡೆದ ದಿನವೇ ಸಂಘವು ಸಂತಾಪ ಸೂಚಿಸಿದ್ದಲ್ಲದೆ, ಪ್ರಕರಣದ ಸಮಗ್ರ ನಿಷ್ಪಕ್ಷಪಾತ ತನಿಖೆಗೆ ಒತ್ತಾಯ ಮಾಡಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





