ಸುಳ್ಯ: ಎಸ್ಸೆಸ್ಸೆಫ್, ಎಸ್.ವೈ.ಎಸ್ ನಿಂದ ರಕ್ತದಾನ ಶಿಬಿರ

ಮಂಗಳೂರು, ಜು. 24: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಸುಳ್ಯ ಡಿವಿಷನ್ ಹಾಗೂ ಸುನ್ನಿ ಯುವಜನ ಸಂಘ ಎಸ್ ವೈ ಎಸ್ ಸುಳ್ಯ ಸೆಂಟರ್ ಇದರ ಜಂಟಿ ಆಶ್ರಯದಲ್ಲಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ನೂರುಲ್ ಇಸ್ಲಾಂ ಮದ್ರಸ ಸಭಾಂಗಣ ಮೊಗರ್ಪಣೆಯಲ್ಲಿ ನಡೆಯಿತು.
ಸುನ್ನಿ ಜಮ್ ಇಯ್ಯತುಲ್ ಉಲಮಾ ಸುಳ್ಯ ತಾಲೂಕು ಅಧ್ಯಕ್ಷ ಕುಞಕೋಯ ತಂಙಳ್ ಸಅದಿ ನೇತೃತ್ವದಲ್ಲಿ ನಡೆದ ಝಿಯಾರತ್ ನೊಂದಿಗೆ ಆರಂಭ ಗೊಂಡ ಸಭಾ ಕಾರ್ಯಕ್ರಮವನ್ನು ಸ್ಥಳೀಯ ಸಹ ಮುದರಿಸ್ ಮುಹಮ್ಮದ್ ರಾಫಿ ಅಹ್ಸನಿ ಉದ್ಘಾಟಿಸಿದರು. ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಐವತ್ತೆರಡು ಕಾರ್ಯಕರ್ತರು ಅತ್ಯುತ್ಸಾಹದಿಂದ ರಕ್ತದಾನ ಮಾಡಿದರು.
ದರ್ಸ್ ವಿದ್ಯಾರ್ಥಿಗಳು ಹಾಗೂ ಮದ್ರಸ ಅಧ್ಯಾಪಕರು ಶಿಬಿರದಲ್ಲಿ ಪಾಲ್ಗೊಂಡು ಮಾದರಿಯಾದರು. ದಕ ಜಿಲ್ಲಾ ವಕಫ್ ಸಲಹಾ ಸಮೀತಿ ಸದಸ್ಯ ಹಾಜಿ ಕೆ ಎಂ ಮುಸ್ತಫ ಎಸ್ ವೈ ಎಸ್ ರಾಜ್ಯ ಸದಸ್ಯಅಬ್ದುಲ್ ಹಮೀದ್ ಬೀಜಕೊಚ್ಚಿ ತಾಲೂಕು ಹಜ್ ಸಂಯೋಜಕ ಹಸನ್ ಹಾಜಿ ಅಬ್ದುಲ್ ಹಮೀದ್ ಸುಣ್ಣಮೂಲೆ ರಫೀಕ್ ಚಾಯ್ಸ್ ಸುಳ್ಯ ರೇಂಜ್ ಅಧ್ಯಾಪಕ ಒಕ್ಕೂಟ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರ್ ತಾಲೂಕು ಕಾರ್ಯ ನಿರತ ಪತ್ರ ಕರ್ತ ಸಂಘ ಪ್ರಧಾನ ಕಾರ್ಯದರ್ಶಿ ಹಸೈನಾರ್ ಜಯನಗರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭವನ್ನು ಎಸ್ ಎಸ್ ಎಫ್ ಜಿಲ್ಲಾ ರಕ್ತ ದಾನ ಶಿಬಿರ ಸಂಯೋಜಕರಾದ ಅಬ್ದುಲ್ ಕರೀಂ ಬೋಳಂತೂರು ಉದ್ಘಾಟಿಸಿದರು. ಲೇಡಿ ಗೋಶನ್ ಆಸ್ಪತ್ರೆ ಮಂಗಳೂರು ಬ್ಲಡ್ ಬ್ಯಾಂಕ್ ಮುಖ್ಯಸ್ಥ ಎಡ್ವರ್ಡ್ ವಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಕ್ತ ದಾನಿಗಳ ಸೇವೆ ಮತ್ತು ಸಂಘಟಕರ ಕಾರ್ಯ ಸಾಧನೆಯನ್ನು ಶ್ಲಾಘಿಸಿದರು. ಎಸ್ ವೈ ಎಸ್ ಸುಳ್ಯ ಸೆಂಟರ್ ಪ್ರಧಾನ ಕಾರ್ಯದರ್ಶಿ ಅಂದುಂಞ ಗೊರಡ್ಕ, ಡಿವಿಷನ್ ಮಾಜಿ ಅಧ್ಯಕ್ಷ ಅಶ್ರಫ್ ಸಖಾಫಿ ಶುಭಹಾರೆಯಿಸಿದರು. ಈ ಸಂದರ್ಭ ಸೆಮೀರ್ ಮೊಗರ್ಪಣೆ ಅಬೂಬಕ್ಕರ್ ಸಿದ್ದೀಕ್ ಕಟ್ಟೆಕಾರ್ಸ್ ಅಬ್ದುರ್ರಹ್ಮಾನ್ ಸಖಾಫಿ ನಾಸರ್ ಬಾಹಸನಿ ಹಸೈನಾರ್ ನೆಕ್ಕಿಲ ಹನೀಫ್ ಸಖಾಫಿ ಹಸೈನಾರ್ ಗುತ್ತಿಗಾರು ಸಿರಾಜುದ್ದೀನ್ ಹಿಮಮಿ ಮುಂತಾದವರು ಉಪಸ್ಥಿತರಿದ್ದರು.
ಡಿವಿಷನ್ ಬ್ಲಡ್ ಉಸ್ತುವಾರಿ ಫೈಝಲ್ ಝುಹ್ರಿ ಸ್ವಾಗತಿಸಿ ಕಾರ್ಯದರ್ಶಿ ಅಬ್ಬಾಸ್ ವಂದಿಸಿದರು.ಕ್ಯಾಂಪಸ್ ಕಾರ್ಯದರ್ಶಿ ಶಫೀಕ್ ಕೊಯಂಗಿ ನಿರೂಪಿಸಿದರು.







