ಪತ್ನಿಯ ಕೊಲೆ: ಆರೋಪಿ ಪತಿಗೆ ಶೋಧ
ಬ್ರಹ್ಮಾವರ, ಜು.24: ಹೇರೂರಿನಲ್ಲಿ ಜು.23ರಂದು ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆಗೈದು ತಲೆಮರೆಸಿಕೊಂಡಿರುವ ಆರೋಪಿ ಪತಿ ರಾಜು ಪೂಜಾರಿ (62) ಎಂಬಾತನ ಶೋಧ ಕಾರ್ಯವನ್ನು ಬ್ರಹ್ಮಾವರ ಪೊಲೀಸರು ಮುಂದು ವರೆಸಿದ್ದಾರೆ.
ಆರೋಪಿಯು ಜು.23ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 7:15ರ ಮಧ್ಯಾವಧಿಯಲ್ಲಿ ಕತ್ತಿಯಿಂದ ಗಿರಿಜಾ ಪೂಜಾರ್ತಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ತಪ್ಪಿಸಿಕೊಂಡು ಪರಾರಿಯಾಗಿರುವ ಆರೋಪಿ ಯನ್ನು ಈವರೆಗೆ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story