ಅಂಡರ್‌ಪಾಸ್ ಕೈಬಿಡಿ ಇಲ್ಲ ಕುರ್ಚಿ ಖಾಲಿ ಮಾಡಿ: ಜಯನ್ ಮಲ್ಪೆ

ಕುಂದಾಪುರ, ಜು.24: ದಲಿತರ ಮಾನ ಪ್ರಾಣ ರಕ್ಷಣೆ ಮಾಡಲಾಗದ ಜಿಲ್ಲಾಡಳಿತ ಒಂದೋ ನ್ಯಾಯಯುತವಾದ ದಲಿತರ ಬೇಡಿಕೆಯನ್ನು ಈಡೇರಿಸಲಿ. ಇಲ್ಲವಾದಲ್ಲಿ ತಮ್ಮ ಕುರ್ಚಿ ಖಾಲಿಮಾಡಿ ಸಂವಿಧಾನ ಬದ್ಧ ಕಾರ್ಯ ನಿರ್ವಹಿಸುವ ದಕ್ಷ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲಿ ಎಂದು ಜನಪರ ಹೋರಾಟಗಾರ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ಒತ್ತಾಯಿಸಿದ್ದಾರೆ.
ಮಂಗಳಾವರ ಬೈಂದೂರಿನ ಕಿರಿಮಂಜೇಶ್ವರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ನಿರ್ಮಿಸುತ್ತಿರುವ ಅಂಡರ್‌ಪಾಸ್ ಸ್ಥಳಾಂತರಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಯೋಜಿಸಿದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡುತಿದ್ದರು.
ಸ್ಥಳೀಯ ಬಿಜೆಪಿ ಶಾಸಕ ಸುಕುಮಾರ ಶಟ್ಟಿ ದಲಿತರು ತನಗೆ ಓಟು ಹಾಕಿಲ್ಲ ಎಂಬ ದ್ವೇಷದಿಂದ ಬಂಡವಾಳ ಶಕ್ತಿಯ ಅಮಿಷಕ್ಕೆ ಬಲಿಯಾಗಿ ತೀರ ಅವೈಜ್ಞಾನಿಕವಾದ ಮತ್ತು ದಲಿತರ ಬದುಕಿಗೆ ದುತ್ಸಾರವಾದ ಅಂಡರ್‌ಪಾಸ್ ಯೋಜನೆಯನ್ನು ಅನಗತ್ಯವಾಗಿ ದಲಿತರು ಹೆಚ್ಚು ವಾಸವಾಗಿರುವ ಕಿರುಮಂಜೇಶ್ವರ ಗ್ರಾಮದಲ್ಲಿ ನಿರ್ಮಾಣ ಮಾಡುವ ಮೂಲಕ ದಲಿತ ದ್ರೋಹಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಈ ಯೋಜನೆಯನ್ನು ಕೈಬಿಡದಿದ್ದಲ್ಲಿ ಶಾಸಕ ಹಾಗೂ ಎಂಪಿಯ ಶವಯಾತ್ರೆ ನಡೆಸುವುದಾಗಿ ಎಚ್ಚರಿಸಿದರು.

ದಸಂಸ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ ಕೇವಲ ಎಂಟು ಲಕ್ಷ ರೂ. ನಷ್ಟವಾಗುತ್ತದೆ ಎಂಬ ಕುಂಟು ನೆಪವೊಡ್ಡಿ ಕಿರಿಮಂಜೇಶ್ವರದಲ್ಲಿ ಅಂಡರ್‌ಪಾಸ್ ನಿರ್ಮಿಸುವ ಮೊದಲು ಒಂದು ಮಾತು ದಲಿತರಿಗೆ ಹೇಳಿದ್ದಿದ್ದರೆ ನಾವು ಕಿಡ್ನಿ ಮಾರಾಟ ಮಾಡಿಯಾದರೂ ನೀಡುತ್ತಿದ್ದೆವು. ಆದರೆ ಜಿಲ್ಲಾಡಳಿತ ಹೆದ್ದಾರಿ ಪ್ರಾಧಿಕಾರಕ್ಕೆ ಮಣಿದು ನೂರಾರು ಪೋಲಿಸರ ಮೂಲಕ ಹೆದರಿಸಿ ಕಾಮಗಾರಿ ನಡೆಸುತ್ತಿ ರುವುದು ನಾಚಿಕೆಗೇಡು ಎಂದರು.
ಪ್ರತಿಭಟನೆಯನ್ನು ಉದೇಶಿಸಿ ಜಿಲ್ಲಾ ದಲಿತ ಮುಖಂಡರಾದ ವಾಸುದೇವ ಮುದ್ದೂರು, ನಾರಾಯಣ ರಾವ್ ಮಾತನಾಡಿದರು. ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಕರುಣಾಕರ, ಚಂದ್ರ ಹಳಗೇರಿ, ರಾಮಚಂದ್ರ ಕಿರಿಮಂಜೇಶ್ವರ, ಮಂಜುನಾಥ ಬೇಟ್ರಕುಳು, ಗೀತಾ ಸುರೇಶ್, ನೇತ್ರಾವತಿ, ಗ್ರಾಪಂ ಸದಸ್ಯೆ ಅನುರಾಧ ಮೊದಲಾದವರು ಭಾಗವಹಿಸಿದ್ದರು.