1662 ಮಾನಹಾನಿಕರ ಜಾಲತಾಣಗಳನ್ನು, ಸುದ್ದಿಗಳನ್ನು ತಡೆಹಿಡಿದ ಸಾಮಾಜಿಕ ಮಾಧ್ಯಮಗಳು

ಹೊಸದಿಲ್ಲಿ, ಜು.24: ಕಾನೂನು ಅನುಷ್ಠಾನ ಸಂಸ್ಥೆಗಳ ಮನವಿಯ ಮೇರೆಗೆ ಫೇಸ್‌ಬುಕ್ ಮತ್ತು ಟ್ವಿಟರ್‌ನಂಥ ಸಾಮಾಜಿಕ ಮಾಧ್ಯಮಗಳು 1662 ಮಾನಹಾನಿಕರ ಜಾಲತಾಣಗಳು ಮತ್ತು ಸುದ್ದಿಗಳನ್ನು ತಡೆಹಿಡಿದಿದೆ ಎಂದು ಕೇಂದ್ರ ಸಚಿವ ಹನ್ಸ್‌ರಾಜ್ ಗಂಗಾರಾಮ್ ಅಹಿರ್ ತಿಳಿಸಿದ್ದಾರೆ.
ಮನವಿ ಮಾಡಲಾದ 1,076 ಯುಆರ್‌ಎಲ್‌ಗಳ ಪೈಕಿ ಫೇಸ್‌ಬುಕ್ 956 ಯುಆರ್‌ಎಲ್‌ಗಳನ್ನು ತಡೆಹಿಡಿದರೆ, ಟ್ವಿಟರ್ 728ರಲ್ಲಿ 409 ಯುಆರ್‌ಎಲ್ ಹಾಗೂ ಯೂಟ್ಯೂಬ್ 182ರಲ್ಲಿ 152 ಯುಆರ್‌ಎಲ್‌ಗಳನ್ನು ಬ್ಲಾಕ್ ಮಾಡಿರುವುದಾಗಿ ಲೋಕಸಭೆಯಲ್ಲಿ ಅಹಿರ್ ತಿಳಿಸಿದ್ದಾರೆ. ಇದೇ ವೇಳೆ ಇನ್ಸ್ಟಾಗ್ರಾಮ್ 150 ಯುಆರ್‌ಎಲ್‌ಗಳ ಪೈಕಿ 66 ಯುಆರ್‌ಎಲ್‌ಗಳನ್ನು ಹಾಗೂ ಇತರರು 109ರ ಪೈಕಿ 79 ಯುಆರ್‌ಎಲ್‌ಗಳನ್ನು ಬ್ಲಾಕ್ ಮಾಡಿರುವುದಾಗಿ ಸಚಿವರು ತಿಳಿಸಿದ್ದಾರೆ.
Next Story





