ಲೋಕಾಯುಕ್ತ ಕಚೇರಿಯಲ್ಲಿ ಭಜನೆ: ವಿಡಿಯೋ ವೈರಲ್
ಬೆಂಗಳೂರು, ಜು.25: ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿ ಮೆರೆದಿದ್ದ ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿಯೇ ಕೆಲ ಮಂದಿ ಭಜನೆ ನಡೆಸುತ್ತಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರದ ಬಹುಮಹಡಿ ಕಟ್ಟಡದಲ್ಲಿರುವ ಲೋಕಾಯುಕ್ತ ಕಚೇರಿಯ 5ನೆ ಮಹಡಿಯಲ್ಲಿ ಕೆಲ ಸಿಬ್ಬಂದಿ ಪ್ರತಿನಿತ್ಯ ಮಧ್ಯಾಹ್ನ ಊಟವಾದ ನಂತರ ಭಜನೆ, ಸಹಸ್ರನಾಮ ಹಾಗೂ ಜಪ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಕಾರ್ಯಕ್ರಮಗಳ ಬಗ್ಗೆ ಲೋಕಾಯುಕ್ತರಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಜನರು ಲೋಕಾಯುಕ್ತವನ್ನೆ ಮರೆಯುತ್ತಿದ್ದಾರೆ. ಅಲ್ಲದೇ ಈ ಮೊದಲು ಲೋಕಾಯುಕ್ತರಿಗೆ ಚಾಕು ಹಾಕಿದ ಘಟನೆ ಮಾಸುವ ಮುನ್ನವೇ ಲೋಕಾಯುಕ್ತ ಕಚೇರಿಯಲ್ಲಿ ಮಾಡಿದ್ದಾರೆನ್ನಲಾದ ಭಜನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Next Story