ಮಲ್ಪೆ: ಕಾಲೇಜಿಗೆ ಹೋದ ಯುವತಿ ನಾಪತ್ತೆ

ಮಲ್ಪೆ, ಜು.25: ಉಡುಪಿಯ ಕಾಲೇಜಿಗೆಂದು ಹೋದ ಯುವತಿ ನಾಪತ್ತೆ ಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಡವೂರು ಮೂಡುಬೆಟ್ಟುವಿನ ಚಂದ್ರನಾಯಕ್ ಎಂಬವರ ಮಗಳು ಭಾಗ್ಯಶ್ರೀ (19) ಎಂಬಾಕೆ ಜು.24ರಂದು ಕಾಲೇಜಿಗೆ ಹೋದವಳು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ.
5.4 ಅಡಿ ಎತ್ತರ, ತೆಳ್ಳಗಿನ ಶರೀರ, ಗೋಧಿ ಮೈಬಣ್ಣ ಹೊಂದಿರುವ ಈಕೆ, ಕನ್ನಡ, ಕೊಂಕಣಿ, ತುಳು ಭಾಷೆ ಮಾತನಾಡುತ್ತಾಳೆ. ಈಕೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಮಲ್ಪೆ ಪೊಲೀಸ್ ಠಾಣೆ (0820-2537999)ಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Next Story





