ಬೈಂದೂರು: ರೆವರ್ಸ್ ರೇಂಜರ್ಸ್ ಘಟಕದ ಉದ್ಘಾಟನೆ

ಉಡುಪಿ, ಜು.25: ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19ನೇ ಸಾಲಿನ ರೋವರ್ಸ್ ರೇಂಜರ್ಸ್ ಘಟಕದ ಉದ್ಘಾಟನೆ ಮತ್ತು ಅಭಿವಿನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೈಂದೂರು ಭಾರತ್ ಸೌಟ್ಸ್ ಅಂಡ್ ಗೈಡ್ಸ್‌ನ ಸ್ಥಳೀಯ ಸಂಸ್ಥೆ ಅಧ್ಯಕ್ಷ ರಾಜು ದೇವಾಡಿಗ, ವಿದ್ಯಾರ್ಥಿ ದಿಶೆಯಿಂದಲೇ ಶಿಸ್ತು ಮತ್ತು ಸೇವಾ ಮನೋಭಾವನೆ ಬೆಳೆಸಿಕೊಳ್ಳಲು ರೋವರ್ಸ್-ರೇಂಜರ್ಸ್ ಘಟಕಗಳು ಅತೀ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ತರಬೇತಿ ಆಯುಕ್ತ ಬಿ.ಆನಂದ ಅಡಿಗ ಅಭಿವಿನ್ಯಾಸ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಅಧ್ಯಕ್ಷತೆಯನ್ನು ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ರಘು ನಾಯ್ಕಾ ವಹಿಸಿದ್ದರು.
ರೋವರ್ಸ್ ಲೀಡರ್ ಗಿರೀಶ್ ಕುಮಾರ್ ಗಣ್ಯರನ್ನು ಪರಿಚಯಿಸಿದರು. ರೇಂಜರ್ಸ್ ಲೀಡರ್ ಡಾ.ಸೋಮೇಶ್ವರಿ ಟಿ. ಉಪಸ್ಥಿತರಿದ್ದರು. ವಿಶಾಲ್ ಸ್ವಾಗತಿಸಿ, ಸ್ಟೀಪನ್ ವಂದಿಸಿದರು. ರಮ್ಯ ಕಾರ್ಯಕ್ರಮ ನಿರೂಪಿಸಿದರು.
Next Story





