ಕರ್ನಾಟಕ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆ: ಆ.22 ರಿಂದ ಅಂತಾರಾಷ್ಟ್ರೀಯ ಸಮಾವೇಶ
ಬೆಂಗಳೂರು: ಕರ್ನಾಟಕ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆ ವತಿಯಿಂದ ಆ.22 ರಿಂದ ಮೂರು ದಿನಗಳ ಕಾಲ ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಣ್ಣಿನಿಂದ ನಿರ್ಮಿಸಲಾಗುವ ಕಟ್ಟಡಗಳ ಅಂತಾರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಎಚ್.ಹೇಮಂತ್ ಕುಮಾರ್, ಸಮಾವೇಶದಲ್ಲಿ ಮಣ್ಣಿನಿಂದ ಮನೆಗಳ ನಿರ್ಮಾಣ, ರಚನೆ, ವಿನ್ಯಾಸ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಅಲ್ಲದೆ, ವಿನಿಮಯ ವೇದಿಕೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಇಂಗ್ಲೆಂಡ್, ಫ್ರಾನ್ಸ್, ಚಿಲಿ, ಸೌದಿ ಅರೇಬಿಯಾ, ಶ್ರೀಲಂಕಾ, ಆಸ್ಟ್ರೇಲಿಯಾ, ಜರ್ಮನಿ, ಬ್ರೆಜಿಲ್ ಸೇರಿದಂತೆ ವಿವಿಧ 12 ದೇಶಗಳಿಂದ ತಜ್ಞರು ಪಾಲ್ಗೊಂಡು, ಮಣ್ಣಿನ ಕಟ್ಟಡಗಳ ನಿರ್ಮಾಣದ ಕುರಿತು ಮಾತನಾಡಲಿದ್ದಾರೆ ಎಂದು ಅವರು ವಿವರಿಸಿದರು.
ಸಂಶೋಧನೆ, ನಿರ್ಮಾಣ ವಿಧಾನಗಳು, ವಿನ್ಯಾಸಗಳು, ಬಳಕೆಯ ವಸ್ತುಗಳು, ಇಂಧನ ಉಳಿತಾಯದ ವಿಶೇಷತೆಗಳ ಜತೆಗೆ ಹವಾಮಾನ ವೈಪರೀತ್ಯಕ್ಕೆ ಪರಿಹಾರ ಸೇರಿದಂತೆ ಹಲವು ಮಹತ್ವ ವಿಷಯಗಳ ಕುರಿತು ಚರ್ಚೆ ನಡೆಯುತ್ತದೆ ಎಂದರು.







