ವಿವಾಹಿತ ಮಹಿಳೆಯರಿಗೆ ಮಿಸ್ ಮಂಗಳೂರು ಸ್ಪರ್ಧೆ
ಮಂಗಳೂರು, ಜು.25: ಜೆಸಿಐ ಮಂಗಳೂರು ಲಾಲ್‌ಭಾಗ್ ಹಾಗೂ ಜೆಸಿಐ ಇಂಡಿಯಾ ವತಿಯಿಂದ ವಿವಾಹಿತ ಮಹಿಳೆಯರಿಗೆ ಮಿಸ್ ಮಂಗಳೂರು ಸ್ವರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಸಂಘಟಕಿ ಸೌಜನ್ಯ ಹೆಗ್ಡೆ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಈಗಾಗಲೇ ನೋಂದಣಿ ಆರಂಭವಾಗಿದೆ.ಆ.4ರಂದು ಅಡಿಶನ್ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಈ ಸ್ವರ್ಧೆಯ ಗ್ರೂಮಿಂಗ್ ಕಾರ್ಯ ಆ.10ರಂದು ನಡೆಯಲಿದೆ. ಈ ಬಳಿಕ ಸ್ಪರ್ಧಿಗಳಿಗೆ ತರಬೇತಿ, ಮಾತನಾಡುವ ಕಲೆಗಾರಿಕೆ, ಕಾರ್ಯಾಗಾರ ನಡೆಯಲಿದೆ. ವಿಶೇಷವಾಗಿ ಮೇಕಪ್ ಕುರಿತು ಚಾಂದಿನಿ ಅಗರ್‌ವಾಲ್‌ರಿಂದ ತರಬೇತಿ ಸಿಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೇಸಿಯ ಸೌರಭ್ ಉಪಸ್ಥಿತರಿದ್ದರು.
Next Story





