ಹನೂರು: ಶಿಕ್ಷಣ ಇಲಾಖೆ ವತಿಯಿಂದ ಹೋಬಳಿ ಮಟ್ಟದ ಕ್ರೀಡಾಕೂಟ

ಹನೂರು,ಜು.25: ಮಕ್ಕಳ ಪ್ರತಿಭೆಗಳನ್ನು ಗುರುತಿಸುವುದರ ಜೊತೆಗೆ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕ್ರೀಡಾ ಶಾಲೆಗಳ ಕಡೆ ಮುಖ ಮಾಡುವಂತೆ ಮಾಡಿ ಅವರ ಭವಿಷ್ಯವನ್ನು ಉತ್ತಮ ಮಾಡುವುದು ಪ್ರತಿ ದೈಹಿಕ ಶಿಕ್ಷಕರ ಕರ್ತವ್ಯ ಎಂದು ಬಿಇಒ ಟಿ.ಆರ್ ಸ್ವಾಮಿ ತಿಳಿಸಿದರು.
ಪಟ್ಟಣದ ಮಲೈಮಹದೇಶ್ವರ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹನೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಹನೂರು ವಲಯ ಗುಡ್ಡಗಾಡು ಪ್ರದೇಶಗಳಿಂದ ಕೂಡಿದ್ದರೂ ಕೂಡ ಜಿಲ್ಲೆಯಲ್ಲಿಯೇ ಹಲವು ವರ್ಷಗಳಿಂದ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿಕೊಂಡು ಬಂದಿದ್ದು, ಪ್ರಾಥಮಿಕ ಶಾಲಾ ಹಂತದಲ್ಲಿಯೇ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳನ್ನು ಗುರುತಿಸಿ ನಮ್ಮದೇ ಜಿಲ್ಲೆಯ ಸಂತೇಮರಳ್ಳಿಯಲ್ಲಿರುವ ಕ್ರೀಡಾ ಶಾಲೆಯ ಬಗ್ಗೆ ಮಾಹಿತಿಗಳನ್ನು ನೀಡಿ ಅಲ್ಲಿ ವ್ಯಾಸಂಗ ಮಾಡುವಂತೆ ಅವರಿಗೆ ಪ್ರೋತ್ಸಾಹ ನೀಡಿ, ಭವಿಷ್ಯದ ಉತ್ತಮ ಕ್ರೀಡಾಪಟುಗಳನ್ನಾಗಿ ಮಾಡಲು ದೈಹಿಕ ಶಿಕ್ಷಕರಿಂದ ಮಾತ್ರ ಸಾಧ್ಯವಾಗಿದ್ದು, ಆದ್ದರಿಂದ ನಮ್ಮ ವಲಯದ ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಕ್ರೀಡಾಶಾಲೆಗಳತ್ತ ಮುಖಮಾಡುವಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭ ದೈಹಿಕ ಶಿಕ್ಷಣ ಪರಿವೀಕ್ಷಕ ತೇಜ್‍ಪಾಲ್, ಬಿಆರ್‍ಪಿ ಶ್ರೀನಿವಾಸ್‍ನಾಯ್ಡು, ಶಿಕ್ಷಕ ರವೀಂದ್ರ, ದೈಹಿಕ ಶಿಕ್ಷಕರಾದ ಸೆಂದಿಲ್ ಕುಮಾರ್, ದರ್ಮಲಿಂಗಂ ಇತರರು ಹಾಜರಿದ್ದರು.





