ಅಲ್ಪಸಂಖ್ಯಾತರಿಗೆ ಅಸಮರ್ಪಕ ವಿದ್ಯಾರ್ಥಿವೇತನ: ಆರೋಪ
ಸೂಕ್ತ ಕ್ರಮಕ್ಕೆ ಅಖಿಲ ಭಾರತೀಯ ಮುಸ್ಲಿಮ್ ಲೀಗ್ ಒತ್ತಾಯ
ಮಂಗಳೂರು, ಜು.25: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಸಮರ್ಪಕವಾಗಿ ವಿದ್ಯಾರ್ಥಿವೇತನ ನೀಡುತ್ತಿದ್ದು, ಕೆಲ ವಿದ್ಯಾರ್ಥಿಗಳಿಗೆ ಇನ್ನೂ ವಿದ್ಯಾರ್ಥಿ ವೇತನ ಮಂಜೂರಾತಿಯಾಗಿಲ್ಲ. ಕೂಡಲೇ ಕ್ರಮ ಕೈಗೊಳ್ಳಲು ಅಖಿಲ ಭಾರತೀಯ ಮುಸ್ಲಿಮ್ ಲೀಗ್ ಒತ್ತಾಯಿಸಿದೆ.
ಕೆಲವು ಮುಸ್ಲಿಮ್ ವಿದ್ಯಾರ್ಥಿಗಳಿಗೆ ಕಳೆದ 2-3 ವರ್ಷಗಳಿಂದ ವಿದ್ಯಾರ್ಥಿವೇತನ ದೊರಕುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಘಾಸಿಯುಂಟಾಗುತ್ತಿದೆ. ಎಲ್ಲರಿಗೂ ಹೆಚ್ಚುವರಿಯಾಗಿ ವಿದ್ಯಾರ್ಥಿವೇತನ ನೀಡುವಂತೆ ಸರಕಾರಕ್ಕೆ ಒತ್ತಾಯಿತು. 10ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಪುನಃ ಅದೇ ಶಾಲೆಗೆ ಸೇರಿಸುವಂತೆ ನಿಯಮಾವಳಿಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಈ ಕುರಿತು ಅಖಿಲ ಭಾರತೀಯ ಮುಸ್ಲಿಮ್ ಲೀಗ್‌ನಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
Next Story





