ಹೆಲ್ಮೆಟ್ ರಹಿತರಿಗೆ ಗಣಪನ ಪಾಠ..!
ಬೆಂಗಳೂರು: ರಸ್ತೆ ಸಂಚಾರ ನಿಯಮ ಉಲಂಘಿಸಿದ ಸವಾರರು ಮತ್ತು ಚಾಲಕರಿಗೆ ಗಣೇಶನ ವೇಷ ಧರಿಸಿ ಹೂವು ನೀಡುವ ಮೂಲಕ ವಿಶಿಷ್ಟವಾಗಿ ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಬುಧವಾರ ರಾಜಾಜಿನಗರದ ಪ್ರವೇಶದ್ವಾರದಲ್ಲಿ ಹೆಲ್ಮೆಟ್ ಧರಿಸದ ಮತ್ತು ಸೀಟ್ ಬೆಲ್ಟ್ ಹಾಕದ ಸವಾರರು ಮತ್ತು ಚಾಲಕರಿಗೆ ಗಣೇಶನ ವೇಷ ಧರಿಸಿದ್ದ ವ್ಯಕ್ತಿಯೊಬ್ಬರು ಹೂವುಗಳನ್ನು ನೀಡಿ, ಇನ್ನು ಮುಂದೆ ಸಂಚಾರ ನಿಯಮ ಪಾಲಿಸಿ ಎಂದು ಮನವಿ ಮಾಡಿದರು.
Next Story





