ಚಿಕ್ಕಮಗಳೂರು: ಗೋಮಾಳ ಜಾಗವನ್ನು ನಿವೇಶನಕ್ಕೆ ನೀಡಲು ಜಿಲ್ಲಾಧಿಕಾರಿಗೆ ಮನವಿ

ಚಿಕ್ಕಮಗಳೂರು, ಜು.25: ಮಳಲೂರು ಗ್ರಾಮದ ಸರ್ವೇ ನಂ.79 ರಲ್ಲಿ 13.35 ಎಕರೆ ಗೋಮಾಳ ಜಾಗವನ್ನು ಬಡವರ ನಿವೇಶನಕ್ಕೆ ಹಂಚಿಕೆ ಮಾಡಿಕೊಡಬೇಕಾಗಿ ಮಳಲೂರು ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಶ್ರೀರಂಗಯ್ಯಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ಮಳಲೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಒಟ್ಟು 125 ಕುಟುಂಬದ ಜನರು ತುಂಬಾ ಕಡುಬಡವರಾಗಿದ್ದಾರೆ. ಪ್ರತಿನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಸ್ವಂತ ನಿವೇಶನ, ಮನೆ ಇಲ್ಲದೆ ಬಹಳ ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಅಂಬಳೆ ಹೋಬಳಿಯ ಮಳಲೂರು ಗ್ರಾಮದ ಸರ್ವೇ ನಂ.79ರಲ್ಲಿ 13.35 ಎಕರೆ ಗೋಮಾಳ ಜಾಗ ಇರುವುದನ್ನು ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ಪರಿಶಿಷ್ಟ ಜನಾಂಗದವರಿಗೆ ನಿವೇಶನ ಮತ್ತು ಮನೆ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಹರೀಶ್, ಕೌಶಿಕ್, ಸಾಗರ್, ವಿಶ್ವನಾಥ್, ಉಮೇಶ್, ಸಗನಯ್ಯ, ಗೌರಮ್ಮ, ರೇಣುಕಾ, ಶಾಂತಮ್ಮ ಉಪಸ್ಥಿತರಿದ್ದರು.
Next Story





