Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜುಲೈ 27 : ಈ ಶತಮಾನದ ಅತ್ಯಂತ ದೀರ್ಘಾವಧಿ...

ಜುಲೈ 27 : ಈ ಶತಮಾನದ ಅತ್ಯಂತ ದೀರ್ಘಾವಧಿ ಚಂದ್ರಗ್ರಹಣ

ಗ್ರಹಣಕ್ಕೆ ಸಂಬಂಧಿಸಿ ಮೂಢನಂಬಿಕೆ, ವದಂತಿಗಳನ್ನು ನಂಬಬೇಡಿ. ಇದನ್ನು ಓದಿ

ವಾರ್ತಾಭಾರತಿವಾರ್ತಾಭಾರತಿ26 July 2018 3:53 PM IST
share
ಜುಲೈ 27 : ಈ ಶತಮಾನದ ಅತ್ಯಂತ ದೀರ್ಘಾವಧಿ ಚಂದ್ರಗ್ರಹಣ

ಹೊಸದಿಲ್ಲಿ, ಜು. 26: ಈ ಶತಮಾನದ ಅತ್ಯಂತ ದೀರ್ಘಾವಧಿಯ ಚಂದ್ರಗ್ರಹಣಕ್ಕೆ ಜಗತ್ತು ಜುಲೈ 27, ಶುಕ್ರವಾರ ಸಾಕ್ಷಿಯಾಗಲಿದೆ. ಒಟ್ಟು ಒಂದು ಗಂಟೆ 43 ನಿಮಿಷಗಳ ಕಾಲ ಭೂಮಿಯ ನೆರಳನ್ನು ಚಂದ್ರನ ಮೇಲೆ ನೋಡಬಹುದಾಗಿದೆ. ಇದು ಪೂರ್ಣ ಚಂದ್ರಗ್ರಹಣವಾದರೆ ಭಾಗಶಃ ಚಂದ್ರಗ್ರಹಣ ಸುಮಾರು 6 ಗಂಟೆಗಳಿಗೂ ಹೆಚ್ಚು ಕಾಲವಿರಲಿದೆ. ಈ ಸಂದರ್ಭ ರಕ್ತ ಚಂದಿರ ಅಥವಾ ಬ್ಲಡ್ ಮೂನ್ ಕೂಡ ನೋಡಬಹುದಾಗಿದೆ.

ಆಗ ಚಂದ್ರ ಕೆಂಪಗಿನ ಬಣ್ಣದಲ್ಲಿ ಕಾಣಿಸುತ್ತದೆ. ಈ ಚಂದ್ರಗ್ರಹಣ ಭಾರತ ಹೊರತಾಗಿ ಮಧ್ಯ ಪೂರ್ವ ದೇಶಗಳು, ದಕ್ಷಿಣ ಚೀನಾ ಮತ್ತು ಪೂರ್ವ ಆಫ್ರಿಕಾದಲ್ಲಿ ಸ್ಪಷ್ಟವಾಗಿ ಗೋಚರವಾಗಲಿದೆ.

ಚಂದ್ರಗ್ರಹಣದ ಸಮಯ : ಭಾರತದಲ್ಲಿ ಚಂದ್ರಗ್ರಹಣ ಶುಕ್ರವಾರ ರಾತ್ರಿ 11.44ಕ್ಕೆ ಆರಂಭಗೊಳ್ಳಲಿದೆ. ಪೂರ್ಣ ಚಂದ್ರಗ್ರಹಣ  ಬೆಳಗ್ಗೆ 1 ಗಂಟೆಗೆ ಆರಂಭಗೊಳ್ಳುವ ನಿರೀಕ್ಷೆಯಿದೆ. ಈ ಪೂರ್ಣ ಚಂದ್ರಗ್ರಹಣ 1.15ರಿಂದ 2.43ರ ತನಕ ವೀಕ್ಷಿಸಬಹುದಾಗಿದ್ದು ಈ ಸಂದರ್ಭ  ಚಂದ್ರ ಭೂಮಿಯ ನೆರಳಿನ ಮಧ್ಯ ಭಾಗದಲ್ಲಿರುತ್ತಾನೆ ಹಾಗೂ ಕೆಂಪಗೆ ಕಾಣಿಸಿಕೊಳ್ಳುತ್ತಾನೆ. ಮುಂಜಾವು 4.58ರ ತನಕ ಗ್ರಹಣ ಮುಂದುವರಿಯಲಿದೆ.

ಭಾರತದಲ್ಲಿ ಎಲ್ಲೆಲ್ಲಿ ನೋಡಬಹುದು ?: ವಾಯು ಮಾಲಿನ್ಯದಿಂದಾಗಿ ಕೆಲ ಮೆಟ್ರೋ ನಿವಾಸಿಗಳು ಪೂರ್ಣ ಚಂದ್ರಗ್ರಹಣವನ್ನು ನೋಡುವುದು ಅಸಾಧ್ಯವಾದರೂ ಇತರೆಡೆಗಳವರು ಈ ಗ್ರಹಣವನ್ನು ನೋಡುವ ಅವಕಾಶ ಪಡೆಯಲಿದ್ದಾರೆ. ಆದರೆ ಮೋಡಗಳಿದ್ದರೆ ಮಾತ್ರ ಚಂದ್ರ ಕಾಣಿಸದೇ ಇರಬಹುದು. ಡೆಲ್ಟಾ  ಅಕ್ವೇರಿಡ್ಸ್ ಉಲ್ಕಾಪಾತವನ್ನೂ ಕೆಲ ಮಟ್ಟಿಗೆ ವೀಕ್ಷಿಸಬಹುದಾಗಿದ್ದು ಇದು ಜುಲೈ 30ರಂದು ಕಾಣಿಸುವುದಲ್ಲದೆ ಜುಲೈ 27ರಂದು ಗ್ರಹಣದ ದಿನವೂ ಕಾಣಿಸಲಿದೆ.

ಈ ಚಂದ್ರಗ್ರಹಣದ ವಿಶೇಷತೆಯೇನು ?

ಈ ವರ್ಷದ  ಈ ಚಂದ್ರಗ್ರಹಣದಷ್ಟು ದೀರ್ಘಾವಧಿಯ ಚಂದ್ರಗ್ರಹಣ ಜೂನ್ 9, 2023ರ ತನಕ ನಡೆಯುವುದಿಲ್ಲ. ಈ ಗ್ರಹಣದಂದು ಚಂದ್ರ ಭೂಮಿಯಿಂದ ಅತ್ಯಂತ ದೂರದಲ್ಲಿರುತ್ತಾನೆ. ಆದುದರಿಂದ ಇತರ ದಿನಗಳಿಗಿಂತ ಅಂದು ಚಂದ್ರ ಚಿಕ್ಕದಾಗಿ ಗೋಚರಿಸುತ್ತಾನೆ. ಇದನ್ನು ಮೈಕ್ರೋ ಮೂನ್ ಎನ್ನಲಾಗುತ್ತದೆ.

ಬ್ಲಡ್ ಮೂನ್ -ರಕ್ತ ಚಂದಿರ : ಈ ಬಾರಿಯ ಚಂದ್ರ ಗ್ರಹಣದಂದು ಚಂದ್ರ ಕೆಂಪಗೆ ಕಾಣಿಸಿಕೊಳ್ಳಲಿದೆ. ಭೂಮಿಯಿಂದ ಸೂರ್ಯನ ಕಿರಣಗಳು ಕಪ್ಪಗಿರುವ ಚಂದ್ರನ  ಮೇಲೆ ಪ್ರತಿಫಲಿಸುವುದರಿಂದ ಚಂದ್ರ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ.

ಮೂಢನಂಬಿಕೆ ಬಿಡಿ

 ಸಂಪ್ರದಾಯವಾದಿಗಳು ಸೂರ್ಯಗ್ರಹಣವಷ್ಟೇ ಅಲ್ಲ, ಚಂದ್ರಗ್ರಹಣವೂ ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ, ಚಂದ್ರಗ್ರಹಣದಿಂದ ಯಾವ ತೊಂದರೆ ಇಲ್ಲ. ಸೂರ್ಯಗ್ರಹಣವನ್ನು ಬರೀ ಕಣ್ಣಿನಿಂದ ನೋಡಬಾರದು.

ಚಂದ್ರಗ್ರಹಣ ಅನ್ನೋದು ಖಗೋಳ ವಿಸ್ಮಯ. ಅದನ್ನು ನೋಡಿ ಆನಂದ ಪಡಬೇಕು. ಯಾವುದೇ ಗ್ರಹಣದಿಂದ ಮನುಷ್ಯನಾಗಲಿ, ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಿರುವುದು ಇದುವರೆಗೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಹಾಗಾಗಿ, ಚಂದ್ರಗ್ರಹಣದ ದಿನದಂದು ನಿರಾಂತಕವಾಗಿ ಗ್ರಹಣ ವೀಕ್ಷಿಸಬಹುದು. ಆಹಾರ ಸೇವಿಸಬಹುದು. ಟಿ.ವಿ., ಮೊಬೈಲ್, ಕಂಪ್ಯೂಟರ್ ಬಳಸಬಹುದು.

ಗ್ರಹಣದಂದು ಮನೆಯಲ್ಲಿರುವ ನೀರು ವಿಷವಾಗುತ್ತದೆ ಎಂಬ ನಂಬಿಕೆ ಇದ್ದು, ಅದು ಸುಳ್ಳು ಸುದ್ದಿಯಾಗಿದೆ. ಖಗೋಳ ವಿಸ್ಮಯ ಚಂದ್ರಗ್ರಹಣದ ಸೌಂದರ್ಯವನ್ನು ನಿರಾತಂಕವಾಗಿ ಕಣ್ತುಂಬಿಸಿಕೊಳ್ಳಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X