ಕಾಪು ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯೋತ್ಸವ

ಕಾಪು, ಜು. 26: ವಿದ್ಯಾರ್ಥಿಗಳು ಉತ್ತಮ ವೇತನಕ್ಕಾಗಿ ಇಂಜಿನೀಯರ್ ವೈದ್ಯರಾಗುವ ಕನಸು ಕಾಣುವುದು ಸಹಜ. ಆದರೆ ಭಾರತೀಯ ಸೇನೆಯ ವಿವಿಧ ವಿಭಾಗದಲ್ಲೂ ಅತುತ್ತಮ ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಭಾರತೀಯ ಸೇನೆಯ ನಿವೃತ್ತಿ ಸೈನಿಕ ಲ್ಯಾನ್ಸ್ ನಾಯಕ ಗೋಪಾಲ ಪೂಜಾರಿ ಹೇಳಿದ್ದಾರೆ.
ಅವರು ಗುರುವಾರ ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಯಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು.
ಸೇನೆಯಲ್ಲಿ ಸೇವೆ ಸಲ್ಲಿಸುವುದು ಒಂದು ಒಳ್ಳೆಯ ಅನುಭವ. ಈ ಅನುಭವ ಬೇರೆ ಯಾವ ಸೇವೆಯಿಂದಲೂ ಸಿಗಲು ಸಾಧ್ಯವಿಲ್ಲ. ಪ್ರತಿಯೋರ್ವ ವಿದ್ಯಾರ್ಥಿಯು ಈ ಮೂಲಕ ದೇಶಪ್ರೇಮದ ಬಗ್ಗೆ ಚಿಂತನೆ ನಡೆಸಬೇಕು ಎಂದು ಕರೆ ನೀಡಿದ ಅವರು, ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಗ್ಗೆ ತಮ್ಮ ಅನುಭವವನ್ನುವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ವಿದ್ಯಾನಿಕೇತನ ಸಮೂಹ ಸಂಸ್ಥೆಯ ಪ್ರಾಂಶುಪಾಲ ವಿ.ಕೆ.ಉದ್ಯಾವರ ಮಾತನಾಡಿ, ದೇಶದ ಯುವ ಸಮುದಾಯದಲ್ಲಿ ದೇಶಪ್ರೇಮ ಎಂಬ ಶಬ್ದ ವಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಯುವ ಜನರಲ್ಲಿ ಅದನ್ನು ಜಾಗೃತಿಗೊಳಿಸಿ, ಮೊದಲು ದೇಶ ನಂತರ ನಾನು ಎನ್ನುವುದನ್ನು ಮೈಗೂಡಿಸಿಕೊಳ್ಳಲು ಈ ಕಾರ್ಯಕ್ರವುವನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರು, ವಿದ್ಯಾರ್ಥಿಗಳು, ಶಿಕ್ಷಕರು, ಭಾರತಾಂಬೆಯ ಚಿತ್ರಕ್ಕೆ ಪುಷ್ಪ ನಮನ ಗೈದರು. ಶಿಕ್ಷಕರಾದ ಮಾಧವ ಚಡಗ, ಸುಚಿತ್ರಾ, ವಿದ್ಯಾರ್ಥಿಗಳಾದ ಮುಹಮ್ಮದ್, ಸ್ವಾಲಿಹ್ರಂಜಿತ್ ಕಾರ್ಗಿಲ್ ಮಾತನಾಡಿದರು.
ವಿದ್ಯಾನಿಕೇತನ್ ಸಂಸ್ಥೆಯ ಸಂಯೋಜಕ ದಿನೇಶ್ ಐತಾಳ್, ಆಡಳಿತ ಮಂಡಳಿಯ ಶ್ವೇತಾ ಐತಾಳ್, ವಿದ್ಯಾನಿಕೇತನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಕುಮಾರ್, ಪ್ರೌಢಶಾಲೆಯ ಪ್ರಾಂಶುಪಾಲ ವಿದ್ಯಾಧರ್ ಪುರಾಣಿಕ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ವಿದ್ಯಾಶ್ರಿ, ಸಂದೀಪ್ ಕುಮಾರ್, ಮಾಧವಿ ಚಡಗ, ವಿದ್ಯಾಧರ ಪುರಾಣಿಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಫರಾ ಸ್ವಾಗತಿಸಿದರು. ಸ್ವಾತಿ ವಂದಿಸಿದರು. ರಾಶಿ ಕಾರ್ಯಕ್ರಮ ನಿರೂಪಿಸಿದರು. ಶ್ರೇಯಾ ಮತ್ತು ಬಳಗ ಪ್ರಾರ್ಥನೆಗೈದರು.







