ವಿವಾದಿತ ಚುನಾವಣೆಯಲ್ಲಿ ತನ್ನ ಜಯ ಘೋಷಿಸಿಕೊಂಡ ಇಮ್ರಾನ್ ಖಾನ್

ಇಸ್ಲಾಮಾಬಾದ್, ಜು.26: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದಂತೆಯೇ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಖಾನ್ ತನ್ನ ಪಕ್ಷ ಜಯ ಸಾಧಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈಮಧ್ಯೆ ಇತರ ಪಕ್ಷಗಳು ಖಾನ್, ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಿದ್ದು, ಅಂತಿಮ ಫಲಿತಾಂಶ ಹೊರಬೀಳುವುದು ವಿಳಂಬವಾಗಿದೆ.
ಯಾವುದೇ ರೀತಿಯ ರಾಜಕೀಯ ದ್ವೇಷವನ್ನು ಸಾಧಿಸದೆ ಇರುವ ಮೊದಲ ಸರಕಾರ ನಮ್ಮದಾಗಲಿದೆ ಎಂದು ಖಾನ್ ಗುರುವಾರ ಹೇಳಿಕೊಂಡಿದ್ದಾರೆ.
ಮತ ಎಣಿಕೆಯಲ್ಲಿ ಸಮಸ್ಯೆಗಳಾಗಿದೆ. ಸೇನಾಡಳಿತದ ಇತಿಹಾಸವಿರುವ ದೇಶದಲ್ಲಿ ಈ ಪ್ರಕ್ರಿಯೆ ಪ್ರಜಾಪ್ರಭುತ್ವದ ಮೇಲಾದ ಹಲ್ಲೆ ಎಂದು ನವಾಝ್ ಶರೀಫ್ ಪಕ್ಷದ ಬೆಂಬಲಿಗರು ಆರೋಪಿಸಿದ್ದಾರೆ.
Next Story





