ಹನೂರು: ಕಾನೂನು ಅರಿವು ಕಾರ್ಯಕ್ರಮ

ಹನೂರು,ಜು.26: ಸಮಾಜದಲ್ಲಿ ಪ್ರತಿಯೊಬ್ಬರೂ ಸಹ ಕಾನೂನು ಪಾಲನೆ ಮಾಡುವುದರ ಜೊತೆಗೆ ಕಾನೂನನ್ನು ಗೌರವಿಸಬೇಕೆಂದು ಸಿವಿಲ್ ನ್ಯಾಯಾಧೀಶರಾದ ಟಿ.ಶ್ರೀಕಾಂತ್ ತಿಳಿಸಿದರು.
ಹನೂರು ಸಮೀಪದ ಬಂಡಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ರೋಟರಿ ಸಂಸ್ಥೆ ಕೊಳ್ಳೇಗಾಲ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ತೊಂದರೆ ಇಲ್ಲದೆ ಜೀವನ ನಡೆಸಲು ಕಾನೂನು ಪಾಲನೆ ಅವಶ್ಯಕವಾಗಿದ್ದು, ಕಾನೂನಿಗೆ ಗೌರವ ಕೂಟ್ಟು ಪಾಲಿಸುವವನು ಸುಖಕರವಾಗಿ ಜೀವನ ನಡೆಸುತ್ತಾನೆ. ಆದ್ದರಿಂದ ಕಾನೂನನ್ನು ಗೌರವಿಸಿ ಪಾಲನೆ ಮಾಡುವುದರ ಜೊತೆಗೆ ವ್ಯವಸ್ಥಿತವಾದ ಚೌಕಟ್ಟಿನಲ್ಲಿದ್ದು ನಿಮ್ಮ ಬದುಕನ್ನು ಹಸನಾಗಿಸಿಕೂಳ್ಳಿ ಎಂದರು.
ಕೊಳ್ಳೇಗಾಲ ವಕೀಲರ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ಪಿಯುಸಿ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಲು ಕಾನೂನು ಅರಿವನ್ನು ಹೊಂದಿರಬೇಕು. ಹೀಗಾಗಿ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ರೋಟರಿ ಸಂಘದ ಅಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ, ಕಾರ್ಯದರ್ಶಿ ವೆಂಕಟಚಾಲ, ಪ್ರಾಂಶುಪಾಲರಾದ ಮುತ್ತುರಾಜ್, ಉಪನ್ಯಾಸಕರುಗಳಾದ ನಾಗಸುಂದರ್, ನರೇಂದ್ರನಾಥ್, ಬಸವರಾಜ್, ಶೀಲಾ, ಸಬ್‍ಇನ್ಸ್ ಪಕ್ಟರ್ ನಾಗೇಶ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.







