ಹನೂರು: ಮಲೆಮಹದೇಶ್ವರ ಬೆಟ್ಟದ ಹುಂಡಿಗಳ ಎಣಿಕೆ; 1.35 ಕೋಟಿ ರೂ ಸಂಗ್ರಹ

ಹನೂರು,ಜು.26: ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಹುಂಡಿಗಳ ಎಣಿಕೆಯಲ್ಲಿ 1.35 ಕೋಟಿ ರೂ ಸಂಗ್ರಹವಾಗಿದೆ.
ಮ.ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಗುರುವಾರ ಸಾಲೂರು ಬೃಹನ್ಮಾಠಧ್ಯಕ್ಷ ಗುರುಸ್ವಾಮೀಜಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ತಿನಲ್ಲಿ ಎಣಿಕೆ ಕಾರ್ಯ ನಡೆಯಿತು.
ಈ ಬಾರಿ ಅಮಾವಾಸ್ಯೆ, ಹುಣ್ಣಿಮೆ , ಏಕಾದಶಿದಿನ ಹಾಗೂ ಇನ್ನಿತರ ವಿಶೇಷ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಿದ್ದು, ಈ ಹಿನ್ನಲೆಯಲ್ಲಿ ಕಳೆದ 31 ದಿನದ ಅವಧಿಯಲ್ಲಿ 1,00,35,499 ರೂ. ನಗದು, 36 ಗ್ರಾಂ. ಚಿನ್ನ ಹಾಗೂ 680 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಈ ಸಂದರ್ಭದಲ್ಲಿ ಮಲೈಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ ರೂಪ, ಉಪಕಾರ್ಯದರ್ಶಿ ಶ್ರೀರಾಜಶೇಖರ್‍ಮೂರ್ತಿ ಎಂ.ಬಸವರಾಜು, ಮಹದೇವಸ್ವಾಮಿ, ಎಸ್‍ಬಿಎಂ ವ್ಯವಸ್ಥಾಪಕ ಸೆಂಧಿಲ್‍ನಾಥನ್ ಹಾಗೂ ಕಚೇರಿ ಸಿಬ್ಬಂದಿ ವರ್ಗದವರು ಹಾಜರಿದ್ದರು.





