ದಿಲ್ಲಿ: ಗೋಶಾಲೆಯಲ್ಲಿ 36 ಹಸುಗಳ ಸಾವು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜು.27: ದ್ವಾರಕ ಪ್ರದೇಶದಲ್ಲಿರುವ ಗೋಶಾಲೆಯೊಂದರಲ್ಲಿ 36 ಹಸುಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ದ್ವಾರಕ ನಗರದ ಛಾವ್ಲಾ ಪ್ರದೇಶದಲ್ಲಿರುವ ಈ ಗೋಶಾಲೆಯಲ್ಲಿ 1,400 ಹಸುಗಳಿದ್ದು ಇದರಲ್ಲಿ 36 ಹಸುಗಳು ಮೃತಪಟ್ಟಿರುವ ಬಗ್ಗೆ ಶುಕ್ರವಾರ ಮಧ್ಯಾಹ್ನದ ವೇಳೆ ಮಾಹಿತಿ ನೀಡಲಾಗಿದೆ. ಯಾವುದೋ ಕಾಯಿಲೆಯಿಂದ ಹಸುಗಳು ಸಾವನ್ನಪ್ಪಿರುವ ಸಾಧ್ಯತೆಯಿದೆ. ವೈದ್ಯರ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





