ಪಾಕಿಸ್ತಾನ ಚುಣಾವಣೆ: ಫಲಿತಾಂಶ ವಿಳಂಬಕ್ಕೆ ಮೊಬೈಲ್ ಆ್ಯಪ್ ಕಾರಣ

ಇಸ್ಲಾಮಾಬಾದ್, ಜು. 27: ಪಾಕಿಸ್ತಾನದ ಚುನಾವಣಾ ಫಲಿತಾಂಶ ಪ್ರಕಟನೆಯಲ್ಲಿನ ಭಾರೀ ವಿಳಂಬಕ್ಕೆ ಆ್ಯಂಡ್ರಾಯ್ಡ್
ಆಧಾರಿತ ನೂತನ ಮೊಬೈಲ್ ಆ್ಯಪ್ ತಂತ್ರಜ್ಞಾನ ಕಾರಣ ಎಂದು ಹೇಳಲಾಗಿದೆ.
ಬುಧವಾರ ನಡೆದ ಚುನಾವಣೆಯಲ್ಲಿ ಮತಗಟ್ಟೆಗಳಿಂದ ಕ್ಷಿಪ್ರವಾಗಿ ಫಲಿತಾಂಶ ರವಾನೆಯಾಗುವುದನ್ನು ಖಾತರಿಪಡಿಸುವುದಕ್ಕಾಗಿ ಪಾಕಿಸ್ತಾನ ಚುನಾವಣಾ ಆಯೋಗವು ರಿಸಲ್ಟ್ ಟ್ರಾನ್ಸ್‌ಮಿಶನ್ ಸಿಸ್ಟಮ್ (ಆರ್‌ಟಿಎಸ್) ಎಂಬ ನೂತನ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು.
ಈ ಆ್ಯಪ್, ಮತಗಟ್ಟೆ ಅಧಿಕಾರಿಗಳಿಗೆ ಫಲಿತಾಂಶವನ್ನು ಚುನಾವಣಾಧಿಕಾರಿ ಮತ್ತು ಚುನಾವಣಾ ಆಯೋಗಕ್ಕೆ ತಕ್ಷಣ ಕಳುಹಿಸಲು ಅವಕಾಶ ನೀಡುತ್ತದೆ ಎಂದು ಹೇಳಲಾಗಿತ್ತು.
ಆದರೆ, ಮತದಾನ ಮುಗಿದು 24 ಗಂಟೆಗಳು ಕಳೆದರೂ, ಚುನಾವಣಾ ಆಯೋಗಕ್ಕೆ ಇನ್ನೂ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story





