ಡಿಜಿಟಲ್ ತಂತ್ರಜ್ಞಾನ ಬಳಕೆಗೆ ಭಾರತ, ಯುಎಇ ಒಪ್ಪಂದ

ದುಬೈ, ಜು. 27: ಉತ್ತಮ ಆಡಳಿತಕ್ಕಾಗಿ ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ತಿಳುವಳಿಕೆ ಪತ್ರವೊಂದಕ್ಕೆ ಭಾರತ ಮತ್ತು ಯುಎಇ ಸಹಿ ಹಾಕಿವೆ.
ಭಾರತದ ಹೂಡಿಕೆ ಉತ್ತೇಜನ ಮತ್ತು ಅನುಷ್ಠಾನ ಸಂಸ್ಥೆ ಮತ್ತು ಯುಎಇಯ ಕೃತಕ ಬುದ್ಧಿಮತ್ತೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದರು.
‘‘ಸರಕಾರ ಮತ್ತು ಆಡಳಿತವನ್ನು ಸುಧಾರಿಸುವುದಕ್ಕಾಗಿ ತಂತ್ರಜ್ಞಾನವನ್ನು ಬಳಸಲು ಭಾರತ ಮತ್ತು
ಯುಎಇಜೊತೆಯಾಗಿ ಕೆಲಸ ಮಾಡುತ್ತಿವೆ’’ ಎಂದು ಭಾರತದ ವಾಣಿಜ್ಯ ಸಚಿವ ಸುರೇಶ್ ಪ್ರಭು ಇಲ್ಲಿ ನಡೆದ
ಸಮಾರಂಭವೊಂದರಲ್ಲಿ ಹೇಳಿದರು.
ಮುಂದಿನ ಹಂತದ ಜಾಗತಿಕ ಬೆಳವಣಿಗೆಯು ನೀತಿ ಮಾತ್ರವಲ್ಲ, ತಂತ್ರಜ್ಞಾನದಿಂದಲೂ ಪ್ರೇರಿತವಾಗುತ್ತದೆ ಎಂದು ಪ್ರಭು ಅಭಿಪ್ರಾಯಪಟ್ಟರು.
Next Story





