ಝೀಬ್ರಾದಂತೆ ಕಾಣಲು ಕತ್ತೆಗಳಿಗೆ ಬಣ್ಣ ಬಳಿದ ಮೃಗಾಲಯ!

ಕೈರೋ (ಈಜಿಪ್ಟ್), ಜು. 27: ಕತ್ತೆಗಳಿಗೆ ಬಣ್ಣ ಬಳಿದು ಝೀಬ್ರಾದಂತೆ ಪ್ರದರ್ಶಿಸಿದ ಈಜಿಪ್ಟ್ ರಾಜಧಾನಿ ಕೈರೋದ ಮೃಗಾಲಯವೊಂದು ಅಪಹಾಸ್ಯಕ್ಕೀಡಾಗಿದೆ.
ಕತ್ತೆಗಳು ಝೀಬ್ರಾದಂತೆ ಕಾಣಲು ಅವುಗಳಿಗೆ ಕಪ್ಪು ಪಟ್ಟಿಗಳನ್ನು ಬಳಿಯಲಾಗಿತ್ತು.
ಇಂಟರ್‌ನ್ಯಾಶನಲ್ ಗಾರ್ಡನ್ ಮುನಿಸಿಪಲ್ ಉದ್ಯಾನವನದಲ್ಲಿ ಚೂಪಾದ ಕಿವಿಗಳೊಂದಿಗೆ ವಿಚಿತ್ರವಾಗಿ ಕಾಣುತ್ತಿದ್ದ ಎರಡು ಝೀಬ್ರಾಗಳನ್ನು ವಿದ್ಯಾರ್ಥಿ ಮಹ್ಮೂದ್ ಸರ್ಹಾನ್ ಎಂಬವರು ಗಮನಿಸಿದರು.
ಆ ಪ್ರಾಣಿಗಳಿಗೆ ಬಳಿಯಲಾಗಿದ್ದ ಕಪ್ಪು ಬಣ್ಣವು ಬಿಸಿ ವಾತಾವರಣದಲ್ಲಿ ಹರಡಲು ಆರಂಭಿಸಿತ್ತು. ಇದರಿಂದ ಸರ್ಹಾನ್ ಇನ್ನಷ್ಟು ಸಂಶಯಕ್ಕೊಳಗಾದರು.
ಬಳಿಕ ಅವರು ಆ ‘ಝೀಬ್ರಾ’ಗಳ ಚಿತ್ರವೊಂದನ್ನು ತೆಗೆದು ಜುಲೈ 21ರಂದು ಫೇಸ್‌ಬುಕ್‌ನಲ್ಲಿ ಹಾಕಿದರು. ಅದು ತಕ್ಷಣವೇ ವೈರಲ್ ಆಯಿತು.
ಆದಾಗ್ಯೂ, ಸರ್ಹಾನ್ ನೋಡಿದ ಪ್ರಾಣಿಗಳು ನಿಜವಾದ ಝೀಬ್ರಾಗಳು ಎಂಬುದಾಗಿ ಪ್ರಾಣಿ ಸಂಗ್ರಹಾಲಯದ ನಿರ್ದೇಶಕ ಮುಹಮ್ಮದ್ ಸುಲ್ತಾನ್ ಹೇಳಿದ್ದಾರೆ.
Next Story





