ಹನೂರು: ನದಿಯಲ್ಲಿ ಮುಳುಗಿದ ತೆಪ್ಪ; ಮೂವರು ಅರಣ್ಯ ಇಲಾಖೆ ಸಿಬ್ಬಂದಿ ಪಾರು
ಹನೂರು,ಜು.27: ಕಾವೇರಿ ನದಿ ಪಾತ್ರದಲ್ಲಿ ನೀರು ಹೆಚ್ಚಿದ ಪರಿಣಾಮ ತೆಪ್ಪ ಮುಳುಗಿ, ಅದರಲ್ಲಿದ್ದ ಮೂವರು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಹನೂರು ತಾಲೂಕಿನ ಕಾವೇರಿ ವನ್ಯ ಜೀವಿ ವಿಭಾಗ ಕೌದಳ್ಳಿ ವಲಯದ ದಂಟಳ್ಳಿ ಗ್ರಾಮದಿಂದ 8 ಕಿಮೀ ದೂರದ ಕಾಡಂಚಿನಲ್ಲಿರುವ ಕಾವೇರಿ ನದಿಯ ಹೊಳೆಕೆರೆಯ ಊಗನೀ ಎಂಬಲ್ಲಿ ಶುಕ್ರವಾರ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಗಳು ತೆಪ್ಪದಲ್ಲಿ ಕಾವೇರಿ ನದಿಯನ್ನು ದಾಟುತ್ತಿದ್ದಾಗ ನದಿಯಲ್ಲಿ ನೀರು ಹೆಚ್ಚಾಗಿ ತೆಪ್ಪ ಮುಳುಗಿದ್ದು, ಅದೃಷ್ಟವಶಾತ್ ಈ ಮೂವರು ನದಿಯಲ್ಲಿದ್ದ ಮರದ ಆಶ್ರಯ ಪಡೆದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
Next Story





